ಯುಪಿಯಲ್ಲಿ ಪ್ರಿಯಾಂಕಾ ಪಾತ್ರ; ನಿರ್ಧಾರ ಅವರಿಗೆ ಮತ್ತು ಅವರ ಕುಟುಂಬಕ್ಕೆ ಬಿಟ್ಟಿದ್ದು: ಕಾಂಗ್ರೆಸ್

ಗುರುವಾರ, 30 ಜೂನ್ 2016 (15:17 IST)
ಉತ್ತರ ಪ್ರದೇಶದಲ್ಲಿ ಅಧಿಕಾರವನ್ನು ಮರಳಿ ಗಳಿಸಲು ಪ್ರಿಯಾಂಕ ಅವರನ್ನು ಸಕ್ರಿಯ ರಾಜಕಾರಣಕ್ಕೆ ಕರೆತರಬೇಕು ಎಂಬ ಒತ್ತಾಯಗಳ ಮಧ್ಯೆ ಈ ನಿರ್ಧಾರ ಪ್ರಿಯಾಂಕಾ, ಅವರ ತಾಯಿ ಸೋನಿಯಾ ಗಾಂಧಿ ಮತ್ತು ಸಹೋದರ ರಾಹುಲ್ ಗಾಂಧಿಯವರಿಗೆ ಬಿಟ್ಟಿದ್ದು ಎಂದು ಕಾಂಗ್ರೆಸ್ ಹೇಳಿದೆ. 
 
ಉತ್ತರ ಪ್ರದೇಶದಲ್ಲಿ ಪ್ರಿಯಾಂಕ ಎಷ್ಟರಮಟ್ಟಿಗೆ ಪಾತ್ರ ವಹಿಸಬೇಕು ಎಂಬುದನ್ನು ತಮ್ಮ ತಾಯಿ ಮತ್ತು ಅಣ್ಣನ ಜತೆ ಸೇರಿ ಅವರೇ ನಿರ್ಧರಿಸುತ್ತಾರೆ ಎಂದು ಪಕ್ಷದ ವಕ್ತಾರೆ ಶೋಭಾ ಓಜಾ ತಿಳಿಸಿದ್ದಾರೆ.
 
ತಮ್ಮ ತಾಯಿ ಮತ್ತು ಸಹೋದರ ಪ್ರತಿನಿಧಿಸುವ ರಾಯ್ ಬರೇಲಿ ಮತ್ತು ಅಮೇಥಿ ಹೊರತು ಪಡಿಸಿ ಉಳಿದೆಡೆಗಳಲ್ಲಿ ಪ್ರಚಾರ ನಡೆಸುತ್ತಾರಾ? ಉತ್ತರ ಪ್ರದೇಶ ಚುನಾವಣೆಯಲ್ಲಿ ಅವರ ಪಾತ್ರವೇನು? ಎಂಬುದಾಗಿ ಕೇಳಿದ ಪ್ರಶ್ನೆಗೆ ಓಜಾ ಈ ರೀತಿಯಲ್ಲಿ ಉತ್ತರಿಸಿದ್ದಾರೆ. 
 
ಯುಪಿಯ ಉಸ್ತುವಾರಿ ವಹಿಸಿಕೊಂಡಿರುವ ಎಐಸಿಸಿ ಪ್ರಧಾನ ಕಾರ್ಯದರ್ಶಿ ಗುಲಾಮ್ ನಬಿ ಆಜಾದ್, ಪ್ರಿಯಾಂಕಾ ರಾಜ್ಯಾದ್ಯಂತ ಪ್ರಚಾರ ಕಾರ್ಯ ಕೈಗೊಳ್ಳಲಿದ್ದಾರೆ ಎಂಬ ವಿಶ್ವಾಸವನ್ನು ವ್ಯಕ್ತ ಪಡಿಸಿದ್ದರು. 
 
ಶೀಘ್ರದಲ್ಲಿಯೇ ತಾವು ಮುಖ್ಯಮಂತ್ರಿ ಅಭ್ಯರ್ಥಿಯನ್ನು ಘೋಷಿಸುವುದಾಗಿ ಕಾಂಗ್ರೆಸ್ ಘೋಷಿಸಿದೆ. ಕಳೆದ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ 403 ಸ್ಥಾನಗಳಲ್ಲಿ ಕಾಂಗ್ರೆಸ್ ಕೇವಲ 28ರಲ್ಲಷ್ಟೇ ಗೆಲುವನ್ನು ಸಾಧಿಸಿತ್ತು. 

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ