ಸಚಿವ ಆಜಂಖಾನ್ ಹೇಳಿಕೆ ಸಾಬೀತುಪಡಿಸಲಿ,ಇಲ್ಲಾಂದ್ರೆ ಕ್ಷಮೆ ಕೋರಲಿ: ಬಿಜೆಪಿ

ಸೋಮವಾರ, 8 ಫೆಬ್ರವರಿ 2016 (14:27 IST)
ಪ್ರಧಾನಮಂತ್ರಿ ನರೇಂದ್ರ ಮೋದಿ ದಾವುದ್ ಇಬ್ರಾಹಿಂನನ್ನು ಭೇಟಿ ಮಾಡಿದ್ದಾರೆ ಎಂದು ಆರೋಪಿಸಿದ್ದ ಸಚಿವ ಆಜಂಖಾನ್ ವಿರುದ್ಧ ವಾಗ್ದಾಳಿ ನಡೆಸಿದ ಬಿಜೆಪಿ, ಆಜಂಖಾನ್ ತಮ್ಮ ಹೇಳಿಕೆಯನ್ನು ಸಾಬೀತುಪಡಿಸಬೇಕು .ಇಲ್ಲವಾದಲ್ಲಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಕ್ಷಮೆ ಕೋರಬೇಕು ಎಂದು ಒತ್ತಾಯಿಸಿದೆ.
 
ಸಚಿವ ಆಜಂ ಮುಜಾಫರ್‌ನಗರ ಗಲಭೆ ಕುರಿತಂತೆ ನೀಡಿದ ಕೀಳು ದರ್ಜೆಯ ಹೇಳಿಕೆ ವೋಟ್‌ಬ್ಯಾಂಕ್ ರಾಜಕಾರಣವಾಗಿದೆ. ಅಖಿಲೇಶ್ ಯಾದವ್ ಸರಕಾರದ ವೈಫಲ್ಯಗಳನ್ನು ಮುಚ್ಚಿಟ್ಟು ಜನತೆಯನ್ನು ವಿಭಜಿಸುವ ತಂತ್ರವಾಗಿದೆ ಎಂದು ಕಿಡಿಕಾರಿದೆ. 
 
ಉತ್ತರಪ್ರದೇಶದ ನಗರಾಭಿವೃದ್ಧಿ ಖಾತೆ ಸಚಿವ ಆಜಂ ಖಾನ್ ಆಧಾರರಹಿತ ಹೇಳಿಕೆಯನ್ನು ಸಾಬೀತುಗೊಳಿಸಬೇಕು. ಇಲ್ಲವಾದಲ್ಲಿ ದೇಶಧ ಜನತೆಯ ಕ್ಷಮೆಯಾಚಿಸಬೇಕು ಎಂದು ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಶ್ರೀಕಾಂತ್ ಶರ್ಮಾ ಒತ್ತಾಯಿಸಿದ್ದಾರೆ. 
 
ಮುಜಾಫರ್‌ನಗರ ಗಲಭೆ ಸಚಿವ ಆಜಂಖಾನ್ ಸೃಷ್ಟಿಯಾಗಿದೆ. ಪೊಲೀಸರ ಮೇಲೆ ಒತ್ತಡ ಹೇರಿದ್ದರಿಂದ ಕಿರುಕುಳ ನೀಡಿದ ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳಲು ಸಾಧ್ಯವಾಗಿಲ್ಲ ಎಂದು ಬಿಜೆಪಿ ಆರೋಪಿಸಿದೆ.

ವೆಬ್ದುನಿಯಾವನ್ನು ಓದಿ