ವಿಪಕ್ಷದವರನ್ನು ಕರೆದಿರುವುದು ಸಾರ್ವಜನಿಕರ ಒತ್ತಡದಿಂದ: ಮೋದಿಗೆ ರಾಹುಲ್ ಟಾಂಗ್

ಶುಕ್ರವಾರ, 27 ನವೆಂಬರ್ 2015 (20:43 IST)
ದೇಶದ ಜನತೆಯ ಒತ್ತಡದಿಂದಾಗಿ ಪ್ರಧಾನಿ ಮೋದಿ ವಿಪಕ್ಷಗಳ ಉನ್ನತ ನಾಯಕರನ್ನು ಚರ್ಚೆಗೆ ಆಹ್ವಾನಿಸಿದ್ದಾರೆ ಎಂದು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದಾರೆ.
 
ಕೇಂದ್ರ ಸರಕಾರದಲ್ಲಿರುವವರು ವಿಪಕ್ಷಗಳ ಜೊತೆ ಚರ್ಚೆ ನಡೆಸುವುದು ಸಹಜ. ಆದರೆ ಪ್ರಧಾನಿ ಮೋದಿ, ಸೋನಿಯಾ ಗಾಂಧಿ ಮತ್ತು ಮನಮೋಹನ್ ಅವರನ್ನು ಆಹ್ವಾನಿಸಿರುವುದು ಸಾರ್ವಜನಿಕರ ಒತ್ತಡದಿಂದ. ಮೋದಿಗೆ ವಿಪಕ್ಷಗಳ ಬಗ್ಗೆ ಯಾವತ್ತೂ ಗೌರವವಿಲ್ಲ ಎಂದು ತಿರುಗೇಟು ನೀಡಿದ್ದಾರೆ.
 
ಜಿಎಸ್‌ಟಿ ಮಸೂದೆಯ ಬಗೆಗಿನ ನಿಲುವು ಸ್ಪಷ್ಟವಾಗಿದೆ, ಕೇಂದ್ರ ಮತ್ತು ಕಾಂಗ್ರೆಸ್ ಪಕ್ಷದ ನಡುವೆ ಮೂರು ಅಂಶಗಳ ಭಿನ್ನಾಭಿಪ್ರಾಯಗಳಿವೆ. ಕಾಂಗ್ರೆಸ್ ಸಲಹೆಗಳನ್ನು ಒಪ್ಪಿದಲ್ಲಿ ಮಾತ್ರ ಜಿಎಸ್‌ಟಿ ಮಸೂದೆಗೆ ಅಂಗೀಕಾರ ದೊರೆಯಲಿದೆ ಎಂದರು.
 
ಕಾಂಗ್ರೆಸ್ ಪಕ್ಷದ ಸಲಹೆಗಳಿಗೆ ಕೇಂದ್ರ ಸರಕಾರ ಒಪ್ಪಿದಲ್ಲಿ ಜಿಎಸ್‌ಟಿ ಮಸೂದೆಗೆ ಸಂಸತ್ತಿನಲ್ಲಿ ಅಂಗೀಕಾರ ದೊರೆಯಲಿದೆ. ಜಿಎಸ್‌ಟಿ ಮಸೂದೆಯನ್ನು ಮೊದಲು ತಂದಿದ್ದೇ ಕಾಂಗ್ರೆಸ್.ಜಿಎಸ್‌ಟಿ ಮಸೂದೆ ಜಾರಿಯಾಗಬೇಕು ಎಂದು ನಾವು ಬಯಸುತ್ತೇವೆ. ಆದರೆ, ಬಡವರು ಯಾವುದೇ ರೀತಿಯ ತೆರಿಗೆ ಪಾವತಿಸುವಂತಹ ಕ್ಯಾಪ್ ತೆರಿಗೆಯನ್ನು ಮೊದಲು ತೆಗೆದುಹಾಕಬೇಕು ಎಂದು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದಾರೆ. 
 

ವೆಬ್ದುನಿಯಾವನ್ನು ಓದಿ