ಪುಣೆ ಭೂಕುಸಿತ: ಸಾವಿನ ಸಂಖ್ಯೆ 23ಕ್ಕೆ ಏರಿಕೆ ; ಸ್ಥಳಕ್ಕೆ ಭೇಟಿ ನೀಡಿದ ರಾಜನಾಥ್ ಸಿಂಗ್

ಗುರುವಾರ, 31 ಜುಲೈ 2014 (18:16 IST)
ಪುಣೆಯ ಮಲಿನ್ ಗ್ರಾಮದಲ್ಲಿ ನಡೆದ ಭೂಕುಸಿತದಲ್ಲಿ  ಕನಿಷ್ಠ 23 ಜನ ಸಾವನ್ನಪ್ಪಿದ್ದಾರೆ. 160 ಕ್ಕಿಂತಲೂ ಹೆಚ್ಚು ಜನ ಅವಶೇಷಗಳ ಅಡಿಯಲ್ಲಿ ಸಿಲುಕಿದ್ದಾರೆ  ಎಂಬ ಶಂಕೆ ಇದ್ದು, ಹುಡುಕಾಟ ಮತ್ತು ರಕ್ಷಣಾ ಕಾರ್ಯಕ್ಕೆ ಸರಕಾರ ತನ್ನೆಲ್ಲಾ ಸಂಪನ್ಮೂಲಗಳನ್ನು ಸಜ್ಜುಗೊಳಿಸಿದೆ. 

ಸಾವಿನ ಸಂಖ್ಯೆ ಈಗಾಗಲೇ 23ಕ್ಕೆ ತಲುಪಿದ್ದು, ಸಾವಿನ ಸಂಖ್ಯೆ ಹೆಚ್ಚುವ ಸಾಧ್ಯತೆ ಇದೆ ಎಂಬ ಆತಂಕ ಸೃಷ್ಟಿಯಾಗಿದೆ. 
 
ಕಳೆದ ಬುಧವಾರ ಸ್ಥಳಕ್ಕೆ ಭೇಟಿ ನೀಡಿದ್ದ ಕೇಂದ್ರ ಮಂತ್ರಿ ಅವಘಡ ನಡೆದ ಸ್ಥಳದ ಪರಿಶೀಲನೆ ನಡೆಸಿದ್ದಾರೆ. ಎನ್‌ಸಿಪಿ ವರಿಷ್ಠ ಶರದ್ ಪವಾರ್  ಇಂದು  ಗ್ರಾಮಕ್ಕೆ ಭೇಟಿ ಕೊಡುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತದೆ. 
 
ಈ ದುರಂತ ಘಟನೆಗೆ ಪ್ರಧಾನಿ ನರೇಂದ್ರಮೋದಿ ತೀವೃ ದುಃಖವನ್ನು ಪ್ರಕಟಿಸಿದ್ದಾರೆ. 
 
ಪುಣೆಯಿಂದ 120 ಕಿಮೀ ದೂರದಲ್ಲಿರುವ  ಮಲಿನ್ 50 ಮನೆಗಳುಳ್ಳ ಗ್ರಾಮವಾಗಿತ್ತು. ಈಗ ಗ್ರಾಮ ಪಂಚಾಯತ್ ಕಚೇರಿ ಸೇರಿದಂತೆ ಕೇವಲ ಆರು ಕಟ್ಟಡಗಳನ್ನಷ್ಟನ್ನೇ ನಾವಲ್ಲಿ ಕಾಣಬಹುದು. ಗ್ರಾಮ ಬಹುತೇಕ  ನಾಶವಾಗಿದ್ದು, ಅಲ್ಲಿನ  ಸನ್ನಿವೇಶ ಸಂಪೂರ್ಣ ಬದಲಾಗಿದೆ.

ವೆಬ್ದುನಿಯಾವನ್ನು ಓದಿ