ಕುಡುಕರಿಗೆ ಪೊರಕೆಯಿಂದ ಥಳಿಸಿ : ಮಹಿಳಾ ಪಂಚಾಯತ್ ತೀರ್ಮಾನ

ಶುಕ್ರವಾರ, 31 ಜುಲೈ 2015 (17:22 IST)
ಗಂಡಂದಿರ ಕುಡಿತದ ಚಟದಿಂದ ಬೇಸತ್ತಿದ ಮಹಿಳೆಯರಿಗೆ ಪಟ್ನಾದ ಪಂಚಾಯತ್ ಒಂದು ಆದೇಶ ನೀಡಿದೆ. ತಮ್ಮ ಗ್ರಾಮದಲ್ಲಿ ಸರಾಯಿ ಮಾರಾಟ ಮಾಡುವುದನ್ನು ನಿಷೇಧಿಸಿರುವ ಪಂಚಾಯತ್, ಸರಾಯಿ ಮಾರಾಟ ಮಾಡುವುದು ಮತ್ತು ಕುಡಿಯುವುದನ್ನು ಕಂಡರೆ ಅಂತವರಿಗೆ ಪೊರಕೆಯಿಂದ ಥಳಿಸಿ ಎಂದು ತೀರ್ಪು ನೀಡಿದೆ. 

ಸರಾಯಿ ಮಾರಾಟ ಮತ್ತು ಕುಡಿತದ ಮೇಲೆ ದಂಡವನ್ನು ಸಹ ಪಂಚಾಯತ್ ವಿಧಿಸಿದೆ. 
 
ಬಿಹಾರದ ಪಾಟ್ನಾದಿಂದ 125 ಕೀಲೋಮೀಟರ್ ದೂರವಿರುವ ಶೇಖ್ಪುರ ಜಿಲ್ಲೆಯ ರಮಜಾನ್ಪುರ ಗ್ರಾಮದಲ್ಲಿ ಮಹಿಳಾ ಪಂಚಾಯತ್ ಈ ಮಹತ್ವದ ತೀರ್ಮಾನವನ್ನು ಕೈಗೊಂಡಿದೆ.
 
'ನಾವು ಮದ್ಯವನ್ನು ನಿಷೇಧಿಸಿದ್ದುದಷ್ಟೇ ಅಲ್ಲ. ಕುಡಿಯುವುದು ಅಥವಾ ಮದ್ಯ ಮಾರಾಟ ಮಾಡುವುದು ಪತ್ತೆಯಾದರೆ ಅವರಿಗೆ ದಂಡವನ್ನು ಸಹ ವಿಧಿಸಲಾಗುವುದು', ಎಂದು ಪಂಚಾಯತ್ ಮುಖ್ಯಸ್ಥರಲ್ಲಿ ಒಬ್ಬರಾದ ಶಮಾ ದೇವಿ ಎಂಬುವವರು ಹೇಳಿದ್ದಾರೆ. 
 
'ಪಂಚಾಯತ್ ತೀರ್ಪಿನ ಬಗ್ಗೆ ಗ್ರಾಮಸ್ಥರಿಗೆ ಅರಿವು ಮೂಡಿಸಲು ಗ್ರಾಮದಾದ್ಯಂತ ಪೋಸ್ಟರ್‌ಗಳನ್ನು ತೂಗು ಹಾಕಲಾಗಿದೆ. ಮದ್ಯ ಉದ್ದಿಮೆಯಿಂದಾಗಿ ಮಹಿಳೆಯರು ಬಹಳ ಸಮಸ್ಯೆಗಳನ್ನು ಅನುಭವಿಸಿದ್ದಾರೆ. ಮದ್ಯ ನಮ್ಮ ಪಾಲಿಗೆ ಶಾಪವೆನಿಸಿದೆ. ಆದ್ದರಿಂದ ನಾವು ಇದರ ವಿರುದ್ಧ ಹೋರಾಡಲು ನಿರ್ಧರಿಸಿದ್ದೇವೆ', ಎಂದು ಅವರು ವಿವರಿಸಿದ್ದಾರೆ. 

ವೆಬ್ದುನಿಯಾವನ್ನು ಓದಿ