ಬಾದಲ್‌ಗಳನ್ನು ಜೈಲಿಗೆ ಕಳಿಸುವುದಾಗಿ ಕೇಜ್ರಿವಾಲ್ ಶಪಥ

ಶುಕ್ರವಾರ, 9 ಸೆಪ್ಟಂಬರ್ 2016 (19:10 IST)
ಪ್ರತಿಭಟನೆಗೆ ತಾವು ಜಗ್ಗುವುದಿಲ್ಲ ಮತ್ತು ಬಾದಲ್ ಕುಟುಂಬವನ್ನು ಜೈಲಿಗೆ ಅಟ್ಟುವ ತನಕ ನಾನು ಮತ್ತು ಎಎಪಿ ಪಂಜಾಬಿನಲ್ಲೇ ಉಳಿಯುವುದಾಗಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಖಡಕ್ಕಾಗಿ ಹೇಳಿದ್ದಾರೆ. 
 
ನಾವು ಇಲ್ಲಿಗೆ ಉಳಿಯಲು ಬಂದಿದ್ದೇವೆ. ನಾವು ಎಲ್ಲಿಯೂ ಹೋಗುವುದಿಲ್ಲ ಎಂದು ಗುರುವಾರ ಮಧ್ಯಾಹ್ನ ಮಾಧ್ಯಮಕ್ಕೆ ಕೇಜ್ರಿವಾಲ್ ತಿಳಿಸಿದರು. 
 
ನಾನು ಪಂಜಾಬಿನಲ್ಲಿ ಉಳಿದು ಬಾದಲ್ ಕಂಬವನ್ನು ಉರುಳಿಸಲು ಅಗೆಯುತ್ತಿದ್ದೇವೆ. ಬಾದಲ್ ಕಂಬ ಉರುಳಿಸುವ ತನಕ ನಾವು ಕದಲುವುದಿಲ್ಲ ಎಂದು ಕೇಜ್ರಿವಾಲ್ ಮಾರ್ಮಿಕವಾಗಿ ಹೇಳಿದರು. 
 
ಇದೊಂದು ಚುನಾವಣೆಯಲ್ಲ, ಇದೊಂದು ಕ್ರಾಂತಿ ಎಂದು ಆಮ್ ಆದ್ಮಿ ಪಕ್ಷದ ನಾಯಕ ತಿಳಿಸಿದರು. ಕೇಜ್ರಿವಾಲ್ ಲೂಧಿಯಾನ ರೈಲ್ವೆ ನಿಲ್ದಾಣವನ್ನು ಮುಟ್ಟಿದಾಗ ಒಂದು ಗುಂಪಿನ ಜನರಿಂದ ಪ್ರತಿಭಟನೆ ಎದುರಿಸಿದ್ದರು.
 
ಬಾದಲ್‌ಗಳು ಮತ್ತು ಅಕಾಲಿ ದಳದ ಅಳವಡಿಸುವ ತಂತ್ರಗಳಿಗೆ ತಾನು ಹೆದರುವುದಿಲ್ಲ ಎಂದು ಕೇಜ್ರಿವಾಲ್ ಹೇಳಿದರು. ಸುಖಬೀರ್ ಬಾದಲ್ ನನ್ನ ವಿರುದ್ಧ ಆರೋಪಗಳನ್ನು ಮಾಡುವುದೂ ಸೇರಿದಂತೆ ಅನೇಕ  ಕೆಲಸ ಮಾಡುತ್ತಾರೆಂದು ಜನರು ಹೇಳಿದ್ದಾರೆ.
 
ಅಕಾಲಿಗಳು ಈಗಾಗಲೇ ಆರಂಭಿಸಿದ್ದಾರೆ. ಸುಖಬೀರ್ ಬಾದಲ್ ಎಎಪಿ ಕುರಿತು ನಕಲಿ ಸಿಡಿಗಳನ್ನು ತಯಾರಿಸಲು ವಿಡಿಯೊ ಕಂಪನಿ ಬಾಡಿಗೆ ಪಡೆಯಲಿದೆ. ನಮ್ಮನ್ನು ಕುರಿತು ಅವರು 63 ನಕಲಿ ಸಿಡಿಗಳನ್ನು ಮಾಡಿದ್ದಾರೆಂದು ನನಗೆ ಮಾಹಿತಿಯಿದೆ. ಈಗ ಆ ಸಿಡಿಗಳನ್ನು ಅವರು ಬಿಡುಗಡೆ ಮಾಡುತ್ತಿದ್ದಾರೆಂದು ಕೇಜ್ರಿವಾಲ್ ಆರೋಪಿಸಿದರು. 

ವೆಬ್ದುನಿಯಾವನ್ನು ಓದಿ