ಅಪ್ರಾಪ್ತ ಪುತ್ರಿಯ ಮೇಲೆ ಎರಡು ವರ್ಷಗಳಿಂದ ಅತ್ಯಾಚಾರವೆಸಗಿದ ಪಾಪಿ ತಂದೆಯ ಬಂಧನ

ಬುಧವಾರ, 28 ಜನವರಿ 2015 (15:12 IST)
ಅಪ್ರಾಪ್ತ ಪುತ್ರಿಯ ಮೇಲೆ ಕಳೆದ ಎರಡು ವರ್ಷಗಳಿಂದ ನಿರಂತರವಾಗಿ ಅತ್ಯಾಚಾರವೆಸಗುತ್ತಿದ್ದ 45 ವರ್ಷ ವಯಸ್ಸಿನ ಪಾಪಿ ಟ್ರಕ್ ಚಾಲಕ ತಂದೆಯನ್ನು ಪೊಲೀಸರು ಬಂಧಿಸಿದ್ದಾರೆ.
 
ಜಿಲ್ಲೆಯ ನಾಗಲ್ ಗ್ರಾಮದ ಚೋಟಾ ರಂಗೇರ್ ಬಡಾವಣೆಯ ನಿವಾಸಿಯಾದ ಸುರೀಂದರ್ ಪಾಲ್ ಸಿಂಗ್, ತನ್ನ 16 ವರ್ಷ ವಯಸ್ಸಿನ ಪುತ್ರಿಯ ಮೇಲೆ ಅತ್ಯಾಚಾರವೆಸಗಿದ ಆರೋಪ ಎದುರಿಸುತ್ತಿದ್ದಾನೆ. 
 
ಆರೋಪಿಯ ಪತ್ನಿ ಪೊಲೀಸ್ ಠಾಣೆಗೆ ದೂರು ನೀಡಿ ಪುತ್ರಿಯ ಮೇಲೆ ಪತಿ ಪ್ರತಿನಿತ್ಯ ಅತ್ಯಾಚಾರವೆಸಗುತ್ತಿದ್ದಾನೆ ಎಂದು ದೂರು ನೀಡಿದ್ದಾಳೆ.. ವಿಷಯ ಬಹಿರಂಗಗೊಳಿಸಿದಲ್ಲಿ ಪತ್ನಿ ಮತ್ತು ಪುತ್ರಿಯನ್ನು ಹತ್ಯೆ ಮಾಡುವುದಾಗಿ ಬೆದರಿಕೆಯೊಡ್ಡಿದ್ದ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
 
ಅತ್ಯಾಚಾರಕ್ಕೊಳಗಾದ ಬಾಲಕಿಯನ್ನು ವೈದ್ಯಕೀಯ ಪರೀಕ್ಷೆಗೊಳಪಡಿಸಲಾಗಿದ್ದು, ಅತ್ಯಾಚಾರವೆಸಗಿರುವುದು ಸಾಬೀಕಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
 
 

ವೆಬ್ದುನಿಯಾವನ್ನು ಓದಿ