ರಾಹುಲ್‌ರನ್ನು ಅಚ್ಚಾ ಲಡ್ಕಾ ಎಂದು ಕರೆದ ಅಖಿಲೇಶ್

ಶುಕ್ರವಾರ, 9 ಸೆಪ್ಟಂಬರ್ 2016 (18:43 IST)
ಉತ್ತರಪ್ರದೇಶ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಗುರುವಾರ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿಯನ್ನು ಅಚ್ಚಾ ಲಡ್ಕಾ ಎಂದು ಹೊಗಳಿ, ರಾಜ್ಯಕ್ಕೆ ಆಗಾಗ್ಗೆ ಬರುವಂತೆ ಆಹ್ವಾನ ನೀಡಿದರು. 
 
ಇದು ರಾಜ್ಯದಲ್ಲಿ ಚುನಾವಣೆ ನಂತರದ ಮೈತ್ರಿಗೆ ಆಸ್ಪದ ಕಲ್ಪಿಸಬಹುದೆಂಬ ಊಹಾಪೋಹ ಹರಡಿದೆ. ಕಾಂಗ್ರೆಸ್ ಮತ್ತು ಸಮಾಜವಾದಿ ಪಕ್ಷದ ನಡುವೆ ಇದು ತಿಳಿವಳಿಕೆಯ ಸೂಚನೆ ಎಂದು ರಾಜಕೀಯ ವಲಯಗಳು ಈ ಪ್ರತಿಕ್ರಿಯೆಯನ್ನು ಗ್ರಹಿಸಿವೆ.
 
ರಾಹುಲ್‌ಜಿ ಒಳ್ಳೆಯ ವ್ಯಕ್ತಿ. ಅಚ್ಚಾ ಲಡ್ಕಾ ಹೈ, ಉತ್ತರಪ್ರದೇಶಕ್ಕೆ ಆಗಾಗ್ಗೆ ಬರುತ್ತಿದ್ದರೆ ನಾವು ಸ್ನೇಹಿತರಾಗಬಹುದು ಎಂದು ಅಖಿಲೇಶ್ ರಾಹುಲ್ ಅವರ ಪ್ರಸ್ತುತ ಸಭೆ ಕುರಿತು ನುಡಿದರು. 
 
ರಾಹುಲ್‌ರ ಖಾಟ್ ಸಭಾದಲ್ಲಿ ಮಂಚಗಳನ್ನು ಹೊತ್ತೊಯ್ದ ರೈತರ ಕುರಿತು ಪ್ರತಿಕ್ರಿಯಿಸಿದ ಅಖಿಲೇಶ್ ರೈತರು ಸೈಕಲ್ ಮೇಲೆ ( ಎಸ್‌ಪಿ ಚಿಹ್ನೆ) ಮಂಚಗಳನ್ನು ಒಯ್ದರು. ಅವುಗಳ ಮೇಲೆ ಕುಳಿತು ಲ್ಯಾಪ್‌ಟಾಪ್ ನಿರ್ವಹಿಸುತ್ತಾರೆ ಎಂದು ಅಖಿಲೇಶ್ ತಾವು ಚುನಾವಣೆ ಭರವಸೆ ನೀಡಿದ್ದ ಲ್ಯಾಪ್‌ಟಾಪ್ ಕುರಿತು ಮಾರ್ಮಿಕವಾಗಿ ಹೇಳಿದರು.  

ಪಕ್ಷದ ಕಾರ್ಯಕರ್ತರು ಮಂಚವನ್ನು ಒಯ್ದಿದ್ದರೆ, ಸಮಾಜವಾದಿ ಗೂಂಡಾಗಳು ಮಂಚವನ್ನು ಲೂಟಿ ಮಾಡಿದ್ದಾರೆಂದು ಮಾಧ್ಯಮಗಳು ದೂರುತ್ತಿದ್ದವೆಂದು ಹೇಳಿದರು. 

ವೆಬ್ದುನಿಯಾವನ್ನು ಓದಿ