ತಾಕತ್ತಿದ್ರೆ ಸಂಸತ್ತಿನಲ್ಲಿ ಭೂ ಸ್ವಾಧೀನ ಮಸೂದೆ ಮಂಡಿಸಿ: ಮೋದಿಗೆ ರಾಹುಲ್ ಸವಾಲ್

ಭಾನುವಾರ, 19 ಜುಲೈ 2015 (15:00 IST)
ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಸರಕಾರಕ್ಕೆ ತಾಕತ್ತಿದ್ರೆ ರೈತ ವಿರೋಧಿಯಾದ ಭೂ ಸ್ವಾಧೀನ ಮಸೂದೆಯನ್ನು ಮುಂದಿನ ವಾರದಲ್ಲಿ ನಡೆಯಲಿರುವ ಮುಂಗಾರು ಅಧಿವೇಶನದಲ್ಲಿ ಮಂಡಿಸಿ ಅನುಮತಿ ಪಡೆಯಿಲಿ ಎಂದು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಸವಾಲ್ ಹಾಕಿದ್ದಾರೆ.
 
ಸಂಸತ್ತಿನ ಅನುಮತಿ ಪಡೆದು ಭೂ ಸ್ವಾಧೀನ ಮಸೂಗೆ ಅಂಗೀಕಾರ ಪಡೆಯುವ ದಮ್ ಮೋದಿ ಸರಕಾರಕ್ಕಿಲ್ಲ. ಆದ್ದರಿಂದ ಸುಗ್ರೀವಾಜ್ಞೆ ಮೂಲಕ ಪಾಸ್ ಮಾಡಿಸಲು ಯತ್ನಿಸಿದೆ. ಒಂದು ವೇಳೆ ಸುಗ್ರಿವಾಜ್ಞೆ ಮೂಲಕ ಜಾರಿಗೆ ತಂದಲ್ಲಿ ದೇಶದ ಜನತೆ ಅವರ 56 ಇಂಚ್ ಎದೆಯನ್ನು 5.5 ಇಂಚ್‌ಗೆ ಇಳಿಸುತ್ತಾರೆ. ರೈತರ ಒಂದಿಚ್ಚು ಭೂಮಿಯನ್ನು ಸರಕಾರ ವಶಪಡಿಸಿಕೊಳ್ಳಲು ನಾವು ಆಸ್ಪದ ನೀಡುವುದಿಲ್ಲ ಎಂದು ಗುಡುಗಿದರು.
 
ಕಾಂಗ್ರೆಸ್ ನಾಯಕರ ಸಭೆಯಲ್ಲಿ ಮಾತನಾಡತ್ತಿದ್ದ ರಾಹುಲ್, ರಾಜಸ್ಥಾನದಲ್ಲಿರುವ ವಸುಂಧರಾ ರಾಜೇ ನೇತೃತ್ವದ ಸರಕಾರ ರಿಮೋಟ್ ಕಂಟ್ರೋಲ್ ಸರಕಾರವಾಗಿದೆ. ಇದರ ರಿಮೋಟ್ ಲಂಡನ್‌ನಲ್ಲಿದೆ ಎಂದು ಲೇವಡಿ ಮಾಡಿದರು.
 
ಭಾರತದಲ್ಲಿದ್ದ ಬ್ರಿಟಿಷರು ಇಂಗ್ಲೆಂಡ್‌ನಲ್ಲಿ ರಿಮೋಟ್ ಕಂಟ್ರೋಲ್ ಹೊಂದಿದ್ದರು ಅದರಂತೆ ರಾಜೇ ಕೂಡಾ ಲಂಡನ್‌ನಲ್ಲಿರುವ ಲಲಿತಚ್ ಮೋದಿಯಂತಹ ವ್ಯಕ್ತಿಯ ರಿಮೋಟ್ ಕಂಟ್ರೋಲ್ ಆಗಿದ್ದಾರೆ ಎಂದು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ. 
 

ವೆಬ್ದುನಿಯಾವನ್ನು ಓದಿ