ಭೂ ಸ್ವಾಧೀನ ಮಸೂದೆ: ಮೋದಿ ಸರಕಾರ ಸೋತು ಓಡಿಹೋಗಿದೆ ಎಂದ ರಾಹುಲ್ ಗಾಂಧಿ

ಮಂಗಳವಾರ, 4 ಆಗಸ್ಟ್ 2015 (18:48 IST)
ಭೂಸ್ವಾಧೀನ ಮಸೂದೆ ಕುರಿತಂತೆ ಯೂ-ಟರ್ನ್ ಹೊಡೆದ ಮೋದಿ ಸರಕಾರದ ಕ್ರಮವನ್ನು ಲೇವಡಿ ಮಾಡಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಮೋದಿ ಸರಕಾರ ಮೊದಲು ಬೆದರಿಸಿತು ನಂತರ ಜೋರಾಗಿ ಕೂಗಿತು. ಆದರೆ ಕಾಂಗ್ರೆಸ್ ಪಕ್ಷದ ಕಠಿಣ ನಿಲುವು ಕಂಡು ಇದೀಗ ಓಡಿ ಹೋಗಿದೆ ಎಂದರು. 
 
ಲಲಿತ್‌ಗೇಟ್ ಮತ್ತು ವ್ಯಾಪಂ ಹಗರಣದ ಬಗ್ಗೆಯೂ ಕಾಂಗ್ರೆಸ್ ಇದೇ ಕಠಿಣ ನಿಲುವು ತಾಳಲಿದ್ದು ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳುವವರೆಗೆ ಹೋರಾಟ ಮುಂದುವರಿಯಲಿದೆ ಎಂದು ಹೇಳಿದ್ದಾರೆ.  
 
ಭೂಸ್ವಾಧೀನ ಮಸೂದೆ ಕುರಿತಂತೆ ಕೇಂದ್ರ ಸರಕಾರದ ಎದುರು ಕಾಂಗ್ರೆಸ್ ಬಲವಾಗಿ ನಿಂತಿತ್ತು. ಆರಂಭದಲ್ಲಿ ಮೋದಿ ಸರಕಾರ ಜೋರಾಗಿ ಗದ್ದಲ ಮಾಡಿತು, ಹೆದರಿಸಿತು,ಆದರೆ ಯಾವುದೇ ಪ್ರಯೋಜನವಾಗದಿರುವುದು ಕಂಡು ಯೂ-ಟರ್ನ್ ತೆಗೆದುಕೊಂಡು ಓಡಿಹೋಯಿತು ಎಂದು ವ್ಯಂಗ್ಯವಾಡಿದರು. 
 
ಅದರಂತೆ, ಲಲಿತ್‌ಗೇಟ್ ಮತ್ತು ವ್ಯಾಪಂ ಹಗರಣದಲ್ಲಿ ಭಾಗಿಯಾಗಿದ್ದಾರೆನ್ನಲಾದ ಸುಷ್ಮಾ ಸ್ವರಾಜ್ ಮತ್ತು ವಸುಂಧರಾ ರಾಜೇ ವಿರುದ್ಧ ಕ್ರಮ ಕೈಗೊಳ್ಳುವವರೆಗೆ ಕಲಾಪ ನಡೆಯಲು ಬಿಡುವುದಿಲ್ಲ. ಮೋದಿ ಸರಕಾರ ನಮ್ಮೆಲ್ಲರನ್ನು ಸಂಸತ್ತಿನಿಂದ ಹೊರಹಾಕಿದರೂ ಪರವಾಗಿಲ್ಲ. ಹೋರಾಟ ಮುಂದುವರಿಯಲಿದೆ ಎಂದರು.
 
25 ಮಂದಿ ಕಾಂಗ್ರೆಸ್ ಸಂಸದರನ್ನು ಅಮಾನತ್ತುಗೊಳಿಸಿರುವುದನ್ನು ವಿರೋಧಿಸಿ ಪ್ರತಿಭಟನೆ ನಡೆಸುತ್ತಿರುವ ಸಂದರ್ಭದಲ್ಲಿ ಮೋದಿ ವಿರುದ್ಧ ರಾಹುಲ್ ವಾಗ್ದಾಳಿ ನಡೆಸಿದ್ದಾರೆ. 
 
ಲಲಿತ್‌ಗೇಟ್ ಮತ್ತು ವ್ಯಾಪಂ ಹಗರಣದಲ್ಲಿ ಭಾಗಿಯಾದವರ ವಿರುದ್ಧ ಕ್ರಮ ಕೈಗೊಳ್ಳದಿದ್ದಲ್ಲಿ ಹೋರಾಟ ಮತ್ತಷ್ಟು ತೀವ್ರಗೊಳಿಸಲಾಗುವುದು ಎಂದು ಕಾಂಗ್ರೆಸ್ ಎಚ್ಚರಿಸಿದೆ. 
 

ವೆಬ್ದುನಿಯಾವನ್ನು ಓದಿ