ಸೋನಿಯಾರ ಕೈಯ್ಯಲಿರುವ ಅಧಿಕಾರವನ್ನು ರಾಹುಲ್ ವಹಿಸಿಕೊಳ್ಳಲಿ: ದಿಗ್ವಿಜಯ ಸಿಂಗ್

ಶನಿವಾರ, 1 ನವೆಂಬರ್ 2014 (16:19 IST)
ದೇಶದ ರಾಜಕೀಯದಲ್ಲಿ ಕಾಂಗ್ರೆಸ್ ಕಳೆಗುಂದುತ್ತಿರುವ ಹಿನ್ನೆಲೆಯಲ್ಲಿ ಕಾಳಜಿ ವ್ಯಕ್ತ ಪಡಿಸಿರುವ ಪಕ್ಷದ ಹಿರಿಯ ನಾಯಕ ದಿಗ್ವಿಜಯ ಸಿಂಗ್  ರಾಹುಲ್ ಗಾಂಧಿ ತಾಯಿ ಸೋನಿಯಾರಿಂದ ಪಕ್ಷದ ನಾಯಕತ್ವವನ್ನು ಸ್ವಾಧೀನ ಪಡಿಸಿಕೊಳ್ಳಬೇಕು ಎಂದು ಒತ್ತಾಯಿಸಿದ್ದು, ಇದು ಯುವ ನಾಯಕ ಅಧಿಕಾರವನ್ನು ಕೈಗೆತ್ತಿಕೊಳ್ಳಬೇಕಾದ  ಮತ್ತು ಪಾರ್ಟಿಯನ್ನು ಪುನರುಜ್ಜೀವನಗೊಳಿಸಬೇಕಾದ ಸಮಯ ಎಂದು ವಾದಿಸಿದ್ದಾರೆ.

ರಾಷ್ಟ್ರೀಯ ದಿನ ಪತ್ರಿಕೆಯೊಂದರ ಜತೆ ಮಾತನಾಡುತ್ತಿದ್ದ ಸಿಂಗ್ "ರಾಹುಲ್ ಗಾಂಧಿ ಕಾಂಗ್ರೆಸ್ ನಾಯಕತ್ವವನ್ನು ವಹಿಸಿಕೊಳ್ಳಲಿ. ನಾವು 
ರಾಹುಲ್ ಅಧಿಕಾರವನ್ನು ವಹಿಸಿಕೊಳ್ಳಲು ಇದು ಸಕಾಲವಲ್ಲ ಎಂಬ ವಾದಗಳನ್ನು ತಳ್ಳಿ ಹಾಕಿದ ಅವರು ಎಲ್ಲಾ ಪಕ್ಷಗಳಲ್ಲೂ ಇಳಿಮುಖ ಸಹಜ .ನೀವೇಕೆ ಸಿಪಿಎಂ ಮತ್ತು ಲಾಲು ಪ್ರಸಾದರ ಆರ್‌ಜೆಡಿಯ ಕಳಪೆ ಪ್ರದರ್ಶನದ ಬಗ್ಗೆ  ಮಾತನಾಡುವುದಿಲ್ಲ. ಸೋಲಿಗೆ ಮತ್ತು ನಾಯಕತ್ವಕ್ಕೆ ಏನೂ ಸಂಬಂಧವಿಲ್ಲ ಎಂದು ಹೇಳಿದ್ದಾರೆ. 
 
ಕಾಂಗ್ರೆಸ್ ಪಕ್ಷದಲ್ಲಿ ಸಾಂಸ್ಥಿಕ ಚುನಾವಣೆಗಳು ಸಮೀಪಿಸುತ್ತಿರುವುದು ರಾಹುಲ್ ಪದೋನ್ನತಿಯ ಒತ್ತಾಯ ಮಹತ್ವ ಪಡೆದುಕೊಳ್ಳುತ್ತಿದೆ. ಈ ವರ್ಷಾಂತ್ಯದೊಳಗೆ  ಪಕ್ಷದ ಸದಸ್ಯತ್ವ ಅಭಿಯಾನ ಕೊನೆಗೊಳ್ಳಲಿದ್ದು, 2015 ರಲ್ಲಿ ಪಕ್ಷದ ಅಧ್ಯಕ್ಷರ ಆಯ್ಕೆ ನಡೆಯಲಿದೆ. 

ವೆಬ್ದುನಿಯಾವನ್ನು ಓದಿ