ಅಂತರ್ಜಾಲದಲ್ಲಿ ನಗೆಪಾಟಲಿಗೀಡಾದ ರಾಹುಲ್ ಗಾಂಧಿ ಹೇಳಿಕೆ

ಬುಧವಾರ, 8 ಮಾರ್ಚ್ 2017 (10:29 IST)
ನವದೆಹಲಿ: ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ನೀಡುವ ಗಂಭೀರ ಹೇಳಿಕೆಗಳು ಕೆಲವೊಮ್ಮೆ ನಗೆಪಾಟಲಿಗೀಡಾಗಿಸುತ್ತವೆ. ಇದೀಗ ಅಂತಹದ್ದೇ ಹೇಳಿಕೆ ನೀಡಿ ಕಾಂಗ್ರೆಸ್ ಉಪಾಧ್ಯಕ್ಷ ಇಂಟರ್ನೆಟ್ ನಲ್ಲಿ ತಮಾಷೆಗೆ  ಗುರಿಯಾಗಿದ್ದಾರೆ.

 
ಡೆಂಗ್ಯು ರೋಗದ ಬಗ್ಗೆ ಹೇಳಿದ ಅವರ ಹೇಳಿಕೆಯೊಂದಕ್ಕೆ ಸಾಮಾಜಿಕ ಜಾಲತಾಣ ಬಳಕೆದಾರರು ಕಾಲೆಳೆಯುತ್ತಿದ್ದಾರೆ. ಅಷ್ಟಕ್ಕೂ ಅವರು ಹೇಳಿದ್ದೇನು? “ಈ ಬಾರಿ ಡೆಂಗ್ಯು ಕಾರಣಕ್ಕೆ ಮಕ್ಕಳು ಪ್ರಾಣ ಕಳೆದುಕೊಂಡರಲ್ವಾ? ಕಾಂಗ್ರೆಸ್ ಆಳ್ವಿಕೆಯಲ್ಲಿ ಈ ರೀತಿ ಡೆಂಗ್ಯು ಕಾರಣಕ್ಕೆ ಸತ್ತಿರುವ ಉದಾಹರಣೆ ಇದೆಯೇ? ಇಲ್ಲ.” ಎಂದಿದ್ದರು.

ಅದೀಗ ನಗೆಪಾಟಲಿಗೀಡಾಗಿದೆ. ಹಿಂದೊಮ್ಮೆ ಇದೇ ರೀತಿ ಅಮೆರಿಕಾದ ಮಾಜಿ ಅಧ್ಯಕ್ಷ ಬರಾಕ್ ಒಬಾಮ ಪತ್ನಿ ಮಿಷೆಲ್ ಒಬಾಮಾರನ್ನು ಸೆಕ್ಸಿ ಎಂದು ಕರೆದು ವಿವಾದಕ್ಕೀಡಾಗಿದ್ದರು. ಅಲ್ಲದೆ, ಅವರ ತೆಂಗಿನ ಕಾಯಿ ಜ್ಯೂಸ್ ಲಂಡನ್ ನಲ್ಲಿ ಮಾರುವ ಐಡಿಯಾವನ್ನು ಸ್ವತಃ ಪ್ರಧಾನಿ ನರೇಂದ್ರ ಮೋದಿ ತಮಾಷೆ ಮಾಡಿದ್ದರು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ