ಪ್ರಿಯಾಂಕಾ ಗಾಂಧಿ ಮಗ ರೆಹಾನ್‌‌‌ನ್ನು ದತ್ತು ತಗೆದುಕೊಳ್ಳಲಿದ್ದಾರಾ ರಾಹುಲ್ ?

ಸೋಮವಾರ, 28 ಜುಲೈ 2014 (17:03 IST)
ರಾಹುಲ್‌ ಗಾಂಧಿ ತನ್ನ ಸಹೋದರಿಯಾದ ಪ್ರಿಯಾಂಕಾ ಗಾಂಧಿ ವಾಡ್ರಾ ಮಗನನ್ನು ದತ್ತುತೆಗೆದುಕೊಳ್ಳಲಿದ್ದಾರೆಯೇ.?  ನೆಹರು-ಗಾಂಧಿ ರಾಜಕೀಯ ಉತ್ತರಾಧಿಕಾರಿಗೆ ಸಂಬಂಧಿಸಿದ ಈ ಅನುಮಾನ ಕಾಂಗ್ರೆಸ್‌ ನಾಯಕರ ನಡುವೆ ಚರ್ಚೆಗೆ ಗ್ರಾಸವಾಗಿದೆ. ರೆಹಾನ್‌ನನ್ನು ದತ್ತು ತಗೆದುಕೊಳ್ಳುವುದರ ಮೂಲಕ ಭವಿಷ್ಯದಲ್ಲಿ ಗಾಂದಿ ಉಪನಾಮೆ ಸೂಕ್ತ ರೀತಿಯಲ್ಲಿ ಬಳಸಿಕೊಳ್ಳಲು ಕಾಂಗ್ರೆಸ್ ನಿರ್ಧರಿಸಿದೆ ಎಂದು ಮೂಲಗಳು ತಿಳಿಸಿವೆ. 
 
ಆಂಗ್ಲ ಪತ್ರಿಕೆಯಾದ ದಿ ಸಂಡೇ ಗಾರ್ಜಿಯನ್‌ ವರದಿ ಪ್ರಕಾರ. ಕೆಲ ದಿನಗಳ ಹಿಂದೆ ರೆಹಾನ್ ಡೆಹರಾಡೂನ್‌ ಶಾಲೆಯಲ್ಲಿ ಅಡ್ಮಿಶನ್ ಪಡೆಯುವ ಸಂದರ್ಭದಲ್ಲಿ ತಮ್ಮ ಹೆಸರಿನೊಂದಿಗೆ ಉಪನಾಮೆಯಾಗಿ ಗಾಂಧಿ ಬಳಸಲು ಪ್ರಯತ್ನಿಸಿದ್ದರು. ಆದರೆ, ಜೊತೆಯಲ್ಲಿದ್ದ ಕೆಲ ವಿದ್ಯಾರ್ಥಿಗಳು ಉಪನಾಮೆ ಬದಲಾವಣೆಯ ಕಾರಣ ಕೇಳಿದಾಗ, ಆಘಾತಗೊಂಡು ವಾದ್ರಾ ಎನ್ನುವ ಉಪನಾಮೆ ಬಳಸಲು ಪ್ರಾರಂಭಿಸಿದರು ಎನ್ನಲಾಗಿದೆ.
 
ಕಳೆದ ವರ್ಷ ಎದುರಾಗಿದ್ದ ಉತ್ತರಾಖಂಡ ಭೀಕರ ಪ್ರವಾಹ ಪರಿಸ್ಥಿತಿಯನ್ನು ಅವಲೋಕಿಸಲು ರಾಹುಲ್ ಗಾಂಧಿ ರಾಜ್ಯದ ಪ್ರವಾಸ ಕೈಗೊಂಡಿದ್ದರು. ಈ ಸಂದರ್ಭದಲ್ಲಿ ರಾಹುಲ್ ತಮ್ಮ ಪ್ರಿಯ ಅಳಿಯನನ್ನು ಶಾಲೆಯ ಹೊರಗಡೆ ಸುತ್ತಾಡಲು ಕರೆದುಕೊಂಡು ಹೋಗಿರುವುದನ್ನು ಕಂಡ ಕೆಲ ಮುಖಂಡರು ಮತ್ತು ಮಾಧ್ಯಮಗಳು ರಾಹುಲ್ ರೆಹಾನ್‌ನನ್ನು ದತ್ತು ತೆಗೆದುಕೊಳ್ಳಬಹುದು ಎನ್ನುವ ಉಹಾಪೋಹ ವರದಿಗಳಿಗೆ ಮತ್ತಷ್ಟು ರೆಕ್ಕೆಪುಕ್ಕ ಸೇರಿಸಿದ್ದರು.   
 
ಕಲಾಪವನ್ನು ವೀಕ್ಷಿಸಲು ಸಂಸತ್ತಿಗೆ ತಮ್ಮ ಗೆಳೆಯರೊಂದಿಗೆ ಆಗಮಿಸಿದ್ದ 14 ವರ್ಷ ವಯಸ್ಸಿನ ರೆಹಾನ್, ಸಭಾಪತಿಯವರ ಗ್ಯಾಲರಿಯಲ್ಲಿ ಕುಳಿತುಕೊಂಡು ಕಲಾಪವನ್ನು ಆಲಿಸಿದ್ದಲ್ಲದೇ ತಮ್ಮ ಅಜ್ಜಿ ಸೋನಿಯಾ ಗಾಂಧಿಯವರ ಕಚೇರಿಗೆ ಭೇಟಿ ನೀಡಿದ ನಂತರ, ರೆಹಾನ್ ಹೆಸರು ಸುದ್ದಿ ಮಾಧ್ಯಮಗಳಿಗೆ ಆಹಾರವಾಗಿತ್ತು,   
 
ರೆಹಾನ್‌ ಲೋಕಸಭೆಯಲ್ಲಿ ಕಲಾಪಗಳನ್ನು ವೀಕ್ಷಿಸುತ್ತಿದ್ದಾಗ ಬಿಜೆಪಿ ನಾಯಕರಾದ ಪ್ರಕಾಶ್ ಜಾವ್ಡೇಕರ್‌ ಮತ್ತು ಸ್ಮೃತಿ ಇರಾನಿ ಪ್ರಶ್ನೆಗೆ ಸೋನಿಯಾ ಗಾಂಧಿ ಉತ್ತರ ನೀಡುತ್ತಿದ್ದರು. ಮೂಲಗಳ ಪ್ರಕಾರ, ಕಾಂಗ್ರೆಸ್‌ ಉಪಾಧ್ಯಕ್ಷ ರಾಹುಲ್‌ ಗಾಂಧಿ ಇನ್ನು ಅವಿವಾಹಿತರಾಗಿದ್ದಾರೆ ಮತ್ತು ಭವಿಷ್ಯದಲ್ಲಿ ಇವರು ಮದುವೆಯಾಗುವ ಯಾವುದೇ ಯೋಜನೆಗಳು ಸದ್ಯಕ್ಕೆ ಕಂಡು ಬರುತ್ತಿಲ್ಲ. ನೆಹರು-ಗಾಂಧಿ ಪರಿವಾರದ ಉತ್ತರಾಧಿಕಾರಿಗೆ ಸಂಬಂಧಿಸಿದ ವಿಷಯವಾಗಿದ್ದರಿಂದ ರೆಹಾನ್‌‌‌ನನ್ನು ದತ್ತು ತಗೆದುಕೊಳ್ಳುವ ಪ್ರಕ್ರೀಯೆ ಗುಪ್ತವಾಗಿರಲಿದೆ ಎಂದು ಮೂಲಗಳು ತಿಳಿಸಿವೆ.  
 
ರಾಹುಲ್‌ ಗಾಂಧಿ, ಕೆಲವು ಮಹಿಳೆಯರ ಜೊತೆ ಸ್ನೇಹ ಸಂಬಂಧ ಹೊಂದಿರುವ ಸುದ್ದಿ ಹೊರಬಂದಿದೆ. ಇದರಲ್ಲಿ ಒಬ್ಬಳು ದಿವಂಗತ ರಾಷ್ಟ್ರಪತಿಯವರ ಮಗಳಾಗಿದ್ದು, ಮತ್ತೊಬ್ಬಳು ದಕ್ಷೀಣ ಭಾರತೀಯ ಚಿತ್ರರಂಗದ ನಟಿಯಾಗಿದ್ದಾಳೆ ಎನ್ನುವ ವರದಿಗಳು ಹರಡಿವೆ.
 
ಮೂಲಗಳ ಪ್ರಕಾರ ಬಜೆಟ್‌‌ ಅಧಿವೇಶನಗಿಂತ ಮೊದಲು ರಾಹುಲ್‌ ತಮ್ಮ ಸ್ನೇಹಿತೆಯೊಬ್ಬಳ ಜೊತೆಗೆ ಲಾಸ್‌ ಎಂಜಲೀಸ್ ಮತ್ತು ದಕ್ಷಿಣ ಕ್ಯಾಲಿಫೋರ್ನಿಯಾದಲ್ಲಿ ಕೆಲ ಅಮೂಲ್ಯ ಕ್ಷಣಗಳನ್ನು ಕಳೆದಿದ್ದಾರೆ. ಮಾಧ್ಯಮದವರಿಂದ ತಪ್ಪಿಸಿಕೊಳ್ಳಲು ಇಬ್ಬರು ಯೂರೋಪ್‌ ಬದಲಿಗೆ ಫೆಸಿಫಿಕ್‌‌ ಮೂಲಕ ಅಮೆರಿಕಾ ತಲುಪಿದ್ದರು. ಆದರೆ, ರಾಹುಲ್ ಗಾಂಧಿ ಆಪ್ತರೂ ಈ ಮಾತನ್ನು ಎಂದಿನಂತೆ ನಿರಾಕರಿಸಿದ್ದಾರೆ.

ವೆಬ್ದುನಿಯಾವನ್ನು ಓದಿ