ರೈಲ್ವೆ ಬಜೆಟ್ ಆಮ್ ಆದ್ಮಿ ಪಾಲಿಗೆ ಖಾಲಿ ಬ್ಯಾಗ್‌ನಂತೆ; ಆಪ್

ಶುಕ್ರವಾರ, 27 ಫೆಬ್ರವರಿ 2015 (17:36 IST)
ಕೇಂದ್ರ ಸರಕಾರ ರೈಲ್ವೆ ಬಜೆಟ್‌ಗೆ ದೂರದೃಷ್ಟಿಯ ಕೊರತೆಯಿದ್ದು ಆಮ್ ಆದ್ಮಿ ಪಾಲಿಗೆ ಖಾಲಿ ಬ್ಯಾಗ್‌ನಂತಾಗಿದೆ ಸಂಚಾರ ಸೇವೆಯಲ್ಲಿನ ಪ್ರಮುಖ ಸಮಸ್ಯೆಗಳ ಬಗ್ಗೆ ಬಜೆಟ್‌ನಲ್ಲಿ ಯಾವುದೇ ಅಂಶ ಮಂಡನೆಯಾಗಿಲ್ಲ ಎಂದು ಆಮ್ ಆದ್ಮಿ ಪಕ್ಷ ಆರೋಪಿಸಿದೆ.
 
ರೈಲ್ವೆ ಸಚಿವ ಸುರೇಶ್ ಪ್ರಭು ಮಂಡಿಸಿದ ರೈಲ್ವೆ ಬಜೆಟ್ ಸುಧಾರಣೆ ಪರ ಅಲ್ಲ ಜನಪ್ರಿಯ ಬಜೆಟ್ ಕೂಡಾ ಅಲ್ಲ. ಅದೊಂದು ಖಾಲಿ ಬ್ಯಾಗ್‌ ಎಂದು ಆಪ್ ಟೀಕಿಸಿದೆ.
 
ರೈಲ್ವೆ ಬಜೆಟ್‌ನ್ನು ಸೂಕ್ಷ್ಮವಾಗಿ ಗಮಿಸಿದಲ್ಲಿ ಜನಸಾಮಾನ್ಯರಿಗೆ ಇದರಿಂದ ಯಾವುದೇ ಪ್ರಯೋಜನವಿಲ್ಲ ಕೇವಲ ಹಣಕಾಸಿನ ಲೆಕ್ಕಾಚಾರ ಕಂಡು ಬರುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದೆ.
 
ರೈಲ್ವೆ ಇಲಾಖೆ ಅತಿ ಹೆಚ್ಚು ಉದ್ಯೋಗಿಗಳನ್ನು ಹೊಂದಿರುವ ಸಂಸ್ಥೆಯಾಗಿದ್ದು, ಕೇಂದ್ರ ಸಚಿವ ಸುರೇಶ್ ಪ್ರಭು ತಮ್ಮ ಸಂಸ್ಥೆಯಲ್ಲಿರುವ ಉದ್ಯೋಗಿಗಳಿಗೂ ನಿರಾಶೆ ಮೂಡಿಸಿದ್ದಾರೆ ಎಂದು ಆರೋಪಿಸಿದೆ.
 
ಆದಾಯ ಸೋರಿಕೆ ಮತ್ತು ಅಡಳಿತ ದುರುಪಯೋಗ, ಹಣ ಮರುಪಾವತಿ, ಸರಕು ಸಾಗಾಣೆ ದರ ಪರಿಶೀಲನೆ ಲೋಪಗಳನ್ನು ಬಜೆಟ್‌ನಲ್ಲಿ ಉಲ್ಲೇಖಿಸಲಾಗಿಲ್ಲ ಎಂದು ಆಮ್ ಆದ್ಮಿ ಪಕ್ಷ ನಿರಾಶೆ ವ್ಯಕ್ತಪಡಿಸಿದೆ..
 

ವೆಬ್ದುನಿಯಾವನ್ನು ಓದಿ