ಪ್ರಧಾನಿ ಭೇಟಿಯ ನಂತ್ರ ಪ್ರಯಾಣ ದರ ಏರಿಕೆ ನಿರ್ಧಾರ: ಡಿವಿಎಸ್

ಮಂಗಳವಾರ, 17 ಜೂನ್ 2014 (14:40 IST)
ರೈಲ್ವೆ ಅಡಳಿತ ಮಂಡಳಿ ದರ ಏರಿಕೆಗೆ ಮಾಡಿರುವ ಶಿಫಾರಸ್ಸಿನ ಬಗ್ಗೆ ಚರ್ಚಿಸಿ ಅಂತಿಮ ನಿರ್ಧಾರ ತೆಗೆದುಕೊಳ್ಳುವ ಮುನ್ನ ಕೇಂದ್ರ ರೈಲ್ವೆ ಖಾತೆ ಸಚಿವ ಡಿ.ವಿ.ಸದಾನಂದಗೌಡ ಪ್ರಧಾನಿ ಮೋದಿಯವರನ್ನು ಭೇಟಿಯಾಗಲಿದ್ದಾರೆ ಎಂದು ಸಚಿವಾಲಯದ ಮೂಲಗಳು ತಿಳಿಸಿವೆ. 
 
ಪ್ರಯಾಣ ದರ ಮತ್ತು ಸರಕು ಸಾಗಾಣೆ ದರ ಏರಿಕೆ ಅನಿವಾರ್ಯವೆಂದು ಪ್ರಧಾನಮಂತ್ರಿ ಕಚೇರಿಗೆ ರೈಲ್ವೆ ಸಚಿವಾಲಯ ಮಾಹಿತಿ ನೀಡಿದೆ. ಆದರೆ, ಪ್ರಧಾನಿ ಮೋದಿ ಸಾಮಾನ್ಯ ಪ್ರಯಾಣಿಕ ದರ ಏರಿಕೆ ಬಗ್ಗೆ ವಿರೋಧ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. 
 
ಹವಾನಿಯಂತ್ರಿತ ಮತ್ತು ಪ್ರಥಮ ಮತ್ತು ದ್ವಿತಿಯ ದರ್ಜೆ ಟಿಕೆಟ್ ದರ ಏರಿಕೆಗೆ ಪ್ರಧಾನಿ ಮೋದಿ ಒಲವು ತೋರಿದ್ದಾರೆ ಎಂದು ಸರಕಾರಿ ಅಧಿಕಾರಿಗಳು ತಿಳಿಸಿದ್ದಾರೆ.
 
ಲೋಕಸಭೆ ಚುನಾವಣೆಯಿಂದಾಗಿ ಮಧ್ಯಂತರ ಬಜೆಟ್ ಮಂಡಿಸಿದ್ದ ಯುಪಿಎ ಸರಕಾರ ಸಾಮಾನ್ಯ ಪ್ರಯಾಣ ದರದಲ್ಲಿ ಹೆಚ್ಚಳಗೊಳಿಸಿರಲಿಲ್ಲ.
 
ರೈಲ್ವೆ ಅಡಳಿತ ಮಂಡಳಿ ಪ್ರಯಾಣಿಕ ದರದಲ್ಲಿ ಶೇ.14.2 ಮತ್ತು ಸರಕು ಸಾಗಾಣೆ ದರದಲ್ಲಿ ಶೇ.6.5 ರಷ್ಟು ಹೆಚ್ಚಳಗೊಳಿಸುವಂತೆ ರೈಲ್ವೆ ಖಾತೆ ಸಚಿವ ಸದಾನಂದಗೌಡರಿಗೆ ವರದಿ ಸಲ್ಲಿಸಿದೆ.
 
 
 

ವೆಬ್ದುನಿಯಾವನ್ನು ಓದಿ