ಐಫೆಲ್ ಟವರ್`ಗೂ ಎತ್ತರವಾದ ರೈಲ್ವೇ ಸೇತುವೆ ಜಮ್ಮುವಿನಲ್ಲಿ ನಿರ್ಮಾಣ

ಬುಧವಾರ, 3 ಮೇ 2017 (21:50 IST)
ಪ್ಯಾರಿಸ್`ನ ಐಫೆಲ್ ಟವರ್`ಗೂ ಎತ್ತರವಾದ ರೈಲ್ವೇ ಸೇತುವೆ ಜಮ್ಮು ಮತ್ತು ಕಾಶ್ಮೀರದ ಚೆನಾಬ್ ನದಿಗೆ ಅಡ್ಡಲಾಗಿ ನಿರ್ಮಾಣವಾಗುತ್ತಿದೆ. 2019ರ ಹೊತ್ತಿಗೆ ಸೇತುವೆ ಸಂಚಾರಕ್ಕೆ ಮುಕ್ತವಾಗಲಿದೆ.
 

ಜಗತ್ತಿನ ಅತ್ಯಂತ ಎತ್ತರದ ರೈಲ್ವೆ ಸೇತುವೆ ಎಂಬ ಖ್ಯಾತಿಗೆ ಪಾತ್ರವಾಗುತ್ತಿದ್ದು, 1.3 ಕಿ.ಮೀ ಉದ್ದವಿರಲಿದೆ. ಜಮ್ಮುವಿನ ಕತ್ರಾದ ಬಕ್ಕಲ್ ಮತ್ತು ಶ್ರೀನಗರದ ಕೌರಿ ಪ್ರದೇಶಗಳ ನಡುವೆ ಈ ಸೇತುವೆ ಸಂಪರ್ಕ ಕಲ್ಪಿಸಲಿದೆ.

1110 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣ ಮಾಡಲಾಗುತ್ತಿದೆ. ಈ ಸೇತುವೆ ಕಾಶ್ಮೀರ ಕಣಿವೆಯ ಪ್ರಮುಖ ಸಂಪರ್ಕ ಕೊಂಡಿಯಾಗಲಿದೆ ಎಂದೇ ಹೇಳಲಾಗುತ್ತಿದೆ. ಚಿನಾಬ್ ನದಿಯಿಂದ 359 ಮೀಟರ್ ಎತ್ತರದಲ್ಲಿ ಈ ಸೇತುವೆ ನಿರ್ಮಾಣವಾಗುತ್ತಿದೆ.

ವೆಬ್ದುನಿಯಾವನ್ನು ಓದಿ