ರೈಲ್ವೆ ಬಜೆಟ್: ಲಾಭ ಎಂಟಾಣೆ, ಖರ್ಚು ರೂಪಾಯಿ ಲಾಲು ಯಾದವ್ ಲೇವಡಿ

ಗುರುವಾರ, 25 ಫೆಬ್ರವರಿ 2016 (14:36 IST)
ಕೇಂದ್ರ ಸಚಿವ ಸುರೇಶ್ ಪ್ರಭು ಮಂಡಿಸಿದ ರೈಲ್ವೆ ಬಜೆಟ್ ಪ್ರಯೋಜನವಿಲ್ಲದ್ದು. ಲಾಭ ಎಂಟಾಣೆ, ಖರ್ಚು ರೂಪಾಯಿ ಎಂದು ಮಾಜಿ ರೈಲ್ವೆ ಸಚಿವ ಲಾಲು ಯಾದವ್ ಲೇವಡಿ ಮಾಡಿದ್ದಾರೆ.
 
ಪ್ರಸ್ತುತ ಬಜೆಟ್‌ನಲ್ಲಿ ಪ್ರಯಾಣಿಕರ ಸುರಕ್ಷತೆಗೆ ಆದ್ಯತೆ ನೀಡಿಲ್ಲ, ರೈಲು ಸಮಯ ನಿಗದಿಪಡಿಸಲು ಸಾಧ್ಯವಾಗಿಲ್ಲ. ಹೊಸ ರೈಲುಗಳ ಘೋಷಣೆಯಿಲ್ಲ. ಹಿಂದಿನ ಯೋಜನೆಗಳಿಗೆ ಹೆಚ್ಚಿನ ಹಣ ಬಿಡುಗಡೆ ಮಾಡಿಲ್ಲ ಎಂದು ಅಸಮಾದಾನ ವ್ಯಕ್ತಪಡಿಸಿದ್ದಾರೆ.   
 
ರೈಲ್ವೆ ಇಲಾಖೆ ದಿವಾಳಿಯಾಗಿದೆ ಜನತೆಗೆ ಮೋಸ ಮಾಡಲು ಕೇಂದ್ರ ಸರಕಾರ ಸಂಚು ರೂಪಿಸಿದೆ ಎಂದು ಆರೋಪಿಸಿದ್ದಾರೆ.
 
ಹಿಂದೆ ನಾನು ರೈಲ್ವೆ ಸಚಿವರಾಗಿದ್ದಾಗ ಉದ್ಯೋಗಿಗಳ ವೇತನ ಹೆಚ್ಚಳಗೊಳಿಸಿ, ಬೋನಸ್ ನೀಡಿದ ನಂತರವೂ ರೈಲ್ವೆ ಇಲಾಖೆ 7 ಸಾವಿರ ಕೋಟಿ ರೂಪಾಯಿ ನಿವ್ವಳ ಲಾಭಗಳಿಸಿತ್ತು. ಆದರೆ, ಎನ್‌ಡಿಎ ಸರಕಾರದಲ್ಲಿ ರೈಲ್ವೆ ಇಲಾಖೆ ಮುಚ್ಚುವ ಹಂತಕ್ಕೆ ಬಂದಿದೆ ಎಂದು ತರಾಟೆಗೆ ತೆಗೆದುಕೊಂಡರು.
 
ಮುಂಬರುವ ಹಣಕಾಸಿನ ಬಜೆಟ್‌ನಲ್ಲಿ ಕೇಂದ್ರ ಸರಕಾರದ ನಿಜ ಬಣ್ಣ ಬಯಲಾಗಲಿದೆ ಎಂದು ಮಾಜಿ ರೈಲ್ವೆ ಸಚಿವ ಲಾಲು ಪ್ರಸಾದ್ ಯಾದವ್ ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ