ಡಿವಿಎಸ್ ಮಗನ ಮೇಲೆ ರೇಪ್ ಆರೋಪ: ಸ್ಪಷ್ಟನೆ ಕೇಳಿದ ಅಮಿತ್ ಶಾ

ಗುರುವಾರ, 28 ಆಗಸ್ಟ್ 2014 (12:08 IST)
ಮಗ ಕಾರ್ತಿಕ ವಿರುದ್ಧ ದಾಖಲಾಗಿರುವ ಅತ್ಯಾಚಾರದ ಪ್ರಕರಣದ ಬಗ್ಗೆ ಸ್ಪಷ್ಟನೆ ನೀಡುವಂತೆ ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ  ಕೇಂದ್ರ ರೇಲ್ವೇ  ಮಂತ್ರಿ ಸದಾನಂದ ಗೌಡರಿಗೆ ಸೂಚಿಸಿದ್ದಾರೆ.

ಆಡಳಿತಾರೂಢ ಪಕ್ಷದ ಪ್ರಮುಖ ಚಹರೆ, ಸಚಿವರ ಮಗನ  ಮೇಲೆ ವಂಚನೆ, ಅಪಹರಣ, ಅತ್ಯಾಚಾರದ ಪ್ರಕರಣ ದಾಖಲಾಗಿರುವುದು ರಾಷ್ಟ್ರೀಯ  ಮಾಧ್ಯಮಗಳಲ್ಲಿ ವರದಿಯಾಗುತ್ತಿದ್ದು, ಬಿಜೆಪಿಯನ್ನು ಚಿಂತೆಗೀಡು ಮಾಡಿದೆ. ಆರೋಪದ  ಸತ್ಯಾಸತ್ಯತೆ ಕುರಿತು ವಿವರಣೆ ನೀಡುವಂತೆ  ಶಾ ಡಿವಿಎಸ್ ಅವರಿಗೆ ಹೇಳಿದ್ದಾರೆ.
 
ಮಗನ ವಿರುದ್ಧದ ಆರೋಪದ ಬಗ್ಗೆ ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಉತ್ತರಿಸುತ್ತಿದ್ದ ಸದಾನಂದ ಗೌಡ ಮಗ "ಕಾರ್ತಿಕ್ ವಿರುದ್ಧದ ಆರೋಪ ಕೇಳಿ ಆಘಾತವಾಗಿದೆ. ನನ್ನ ರಾಜಕೀಯ ಏಳಿಗೆಯನ್ನು ಸಹಿಸದ ಶಕ್ತಿಗಳು ಇಂತಹ ಕುತಂತ್ರಕ್ಕೆ ಕೈಹಾಕಿವೆ ಎನಿಸುತ್ತಿದೆ. ನನ್ನ ಜೀವನ ತೆರೆದಿಟ್ಟ ಪುಸ್ತಕವಿದ್ದಂತೆ. ಸಾರ್ವಜನಿಕ ಜೀವನದಲ್ಲಿ ಯಾವಾಗಲೂ ಶುದ್ಧ ಹಸ್ತನಾಗಿ ಪ್ರಾಮಾಣಿಕವಾದ ರಾಜಕಾರಣ ಮಾಡುತ್ತಿದ್ದೇನೆ.ಆದರೆ ನನ್ನ ಮಗನ ಮೇಲಿನ ಆರೋಪ ನನಗೆ ಮಾನಸಿಕವಾಗಿ ಅಶಾಂತಿಯನ್ನುಂಟು ಮಾಡಿದೆ. ಈ  ಕುರಿತು ಅಮೂಲಾಗ್ರವಾಗಿ ಪರಿಶೀಲಿಸುತ್ತೇನೆ. ನನ್ನ ಮಗ ತಪ್ಪು ಮಾಡಿಲ್ಲವೆಂಬ ನಂಬಿಕೆ ಇದೆ" ಎಂದಿದ್ದಾರೆ.

ವೆಬ್ದುನಿಯಾವನ್ನು ಓದಿ