ಫೇಸ್‌ಬುಕ್ ಮತ್ತು ಟ್ವಿಟ್ಟರ್‌ ಖಾತೆ ತೆರೆದ ರೈಲ್ವೆ ಸಚಿವಾಲಯ

ಮಂಗಳವಾರ, 8 ಜುಲೈ 2014 (19:16 IST)
ಕೇಂದ್ರ ರೈಲ್ವೆ ಖಾತೆ ಸಚಿವ ಸದಾನಂದ ಗೌಡರು ಬಜೆಟ್ ಮಂಡಿಸುವ ಹಿಂದಿನ ದಿನವೇ ರೈಲ್ವೆ ಸಚಿವಾಲಯ ತ್ವರಿತವಾಗಿ ಮಾಹಿತಿ ಪ್ರಸಾರ ಮಾಡುವ ಉದ್ದೇಶದಿಂದ ಫೇಸ್‌ಬುಕ್ ಮತ್ತು ಟ್ವಿಟ್ಟರ್‌ ಖಾತೆ ತೆರೆದಿದೆ. 

ಇಂದು ಬೆಳಿಗ್ಗೆ ಸದಾನಂದ ಗೌಡರು ಮಂಡಿಸಿರುವ ಬಜೆಟ್‌ನ ಸಂಪೂರ್ಣ ಮಾಹಿತಿ ಈ  ಫೇಸ್‌ಬುಕ್  ಮತ್ತು ಟ್ವಿಟ್ಟರ್‌ಗಳಲ್ಲಿ ಲಭ್ಯವಾಗಲಿದೆ. 
 
ಈ ಕ್ರಮವು  ಜನರನ್ನು ವೇಗವಾಗಿ ತಲುಪಲು ಸಹಾಯ ಮಾಡಲಿದೆ ಎಂದು ರೈಲ್ವೆ ಸಚಿವ ಸದಾನಂದ ಗೌಡ ಹೇಳಿದ್ದಾರೆ. 
 
ಇಂದಿನಿಂದ ಇಲಾಖೆಗೆ ಸಂಬಂಧಿಸಿದ ಸಂಪೂರ್ಣ ಮಾಹಿತಿ  ಸಾಮಾಜಿಕ ಜಾಲ ತಾಣದಲ್ಲಿ ದೊರೆಯಲಿದೆ. ಪ್ರತಿಯೊಬ್ಬರು ಕೂಡ ಐಟಿ ಬಳಕೆಯನ್ನು ಮಾಡಬೇಕು ಎನ್ನುವುದು ಪ್ರಧಾನಿ ಮೋದಿಯವರ ಯೋಜನೆ ಎಂದು ಗೌಡ ಹೇಳಿದ್ದಾರೆ. 
 
ರೈಲು ಸಹಾಯವಾಣಿ ಸಂಖ್ಯೆ 139 ಸದ್ಯದಲ್ಲಿಯೇ ಟೋಲ್ ಫ್ರಿ ದೊರೆಯಲಿದ್ದು ಇಂದು ಮಂಡಿಸಿದ ರೈಲ್ವೆ ಬಜೆಟ್‌ನಲ್ಲಿ ಪ್ರಸ್ತಾಪಿಸಲಾಗಿದೆ ಎಂದು ಕೇಂದ್ರ ರೈಲ್ವೆ ಖಾತೆ ಸಚಿವ ಡಿ.ವಿ.ಸದಾನಂದಗೌಡ ತಿಳಿಸಿದ್ದಾರೆ. 

ವೆಬ್ದುನಿಯಾವನ್ನು ಓದಿ