ಲಾತೂರ್ ಜಲ ರೈಲು: 4 ಕೋಟಿ ಬಿಲ್ ಕಳಿಸಿದ ರೈಲ್ವೆ ಇಲಾಖೆ

ಗುರುವಾರ, 12 ಮೇ 2016 (20:56 IST)
ಮೊದಲ ಜಲ ರೈಲು ಲಾತೂರ್‌ ಅನ್ನು ಮುಟ್ಟಿ ಒಂದು ತಿಂಗಳ ಬಳಿಕ ರೈಲ್ವೆ ಒಟ್ಟು 6.20 ಕೋಟಿ ಲೀಟರ್ ನೀರನ್ನು ಬರಪೀಡಿತ ಪ್ರದೇಶಕ್ಕೆ ರವಾನಿಸಿದ್ದು, ಜಿಲ್ಲಾಧಿಕಾರಿಗೆ ಸಾರಿಗೆ ವೆಚ್ಚವಾಗಿ 4 ಕೋಟಿ ರೂ. ಬಿಲ್ಲನ್ನು ಕಳಿಸಿದೆ. 
 
ನಾವು ಲಾಟೂರ್ ಆಡಳಿತಕ್ಕೆ ಬಿಲ್ ಕಳಿಸಿದ್ದು, ನಮಗೆ ಹಣ ಪಾವತಿ ಮಾಡುವುದು ಅಥವಾ ಮೊತ್ತವನ್ನು ಸೂಕ್ತ ಮಾರ್ಗಗಳ ಮೂಲಕ ಮನ್ನಾ ಮಾಡುವಂತೆ ಕೋರುವುದು ಅದಕ್ಕೆ ಬಿಟ್ಟ ವಿಚಾರ. ಅವರ ಮನವಿ ಮೇಲೆ ನಾವು ಜಲ ಸಾರಿಗೆ ಬಿಲ್ ಕಳಿಸಿದ್ದೇವೆ ಎಂದು ರೈಲ್ವೆ ಅಧಿಕಾರಿ ತಿಳಿಸಿದ್ದಾರೆ.
 
ಮೊದಲ ಜಲ ರೈಲು ಜಲದೂತ ಏಪ್ರಿಲ್ 11ರಂದು ಮಹಾರಾಷ್ಟ್ರದಿಂದ ನಿರ್ಗಮಿಸಿ ಏಪ್ರಿಲ್ 12ರಂದು ಲಾತೂರ್ ಮುಟ್ಟಿ 342 ಕಿಮೀ ದೂರ ಕ್ರಮಿಸಿತ್ತು. 
10 ಬೋಗಿಯ ಜಲ ರೈಲಿನ 9 ಟ್ರಿಪ್‌ಗಳ ಬಳಿಕ, 50 ಬೋಗಿಯ ಜಲ ರೈಲನ್ನು 25 ಲಕ್ಷ ಲೀಟರ್ ಸಾಗಣೆಯೊಂದಿಗೆ ಸೇವೆಗಿಳಿಸಲಾಯಿತು.

ವೆಬ್ದುನಿಯಾವನ್ನು ಓದಿ