ಅಮರನಾಥ್ ಯಾತ್ರೆ: ಭದ್ರತಾ ವ್ಯವಸ್ಥೆ ಪರಿಶೀಲಿಸಿದ ರಾಜನಾಥ್ ಸಿಂಗ್

ಬುಧವಾರ, 1 ಜುಲೈ 2015 (20:15 IST)
ನಾಳೆಯಿಂದ ಪವಿತ್ರ ಅಮರನಾಥ್ ಯಾತ್ರೆ ಆರಂಭವಾಗಲಿರುವ ಹಿನ್ನೆಲೆಯಲ್ಲಿ ಭದ್ರತಾ ವ್ಯವಸ್ಥೆಯನ್ನು ಪರಿಶೀಲಿಸಲು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಭೇಟಿ ನೀಡಿದ್ದಾರೆ.
 
ಉತ್ತರ ಕಾಶ್ಮಿರದ ಹಿಮಾಲಯದ ತಪ್ಪಲಲ್ಲಿ 3880 ಅಡಿ ಎತ್ತರದಲ್ಲಿರುವ ಅಮರನಾಥ್ ದೇವಾಲಯ ಹಿಂದುಗಳಿಗೆ ಪವಿತ್ರ ತಾಣವಾಗಿದೆ. 
 
ಎರಡು ದಿನಗಳ ಭೇಟಿಗಾಗಿ ಇಲ್ಲಿಗೆ ಆಗಮಿಸಿದ ಸಚಿವ ಸಿಂಗ್, ರಾಜಭವನದಲ್ಲಿ ಜಿಲ್ಲಾಡಲಿತ ಹಾಗೂ ಭಧ್ರತಾ ದಳದ ಉನ್ನತ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ. 
 
ಸಭೆಯಲ್ಲಿ ಅಮರನಾಥ್ ದೇವಾಲಯ ಮಂಡಳಿಯ ಸದಸ್ಯರಾದ ರಾಜ್ಯಪಾಲ ಎನ್.ಎನ್.ವೋರಾ, ರಾಜ್ಯ ಕಾರ್ಯದರ್ಶಿ ಇಕ್ಬಾಲ್ ಖಾಂಡೆ ಡಿಐಜಿ ಕೆ.ರಾಜೇಂದರ್ ಕುಮಾರ್, ಸಿಆರ್‌ಪಿಎಫ್‌ ಡಿಜಿ ಪ್ರಕಾಶ್ ಮಿಶ್ರಾ ಸೇರಿದಂತೆ ಅನೇಕ ಉನ್ನತ ಅಧಿಕಾರಿಗಳು ಉಪಸ್ಥಿತರಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.  
 
59 ದಿನಗಳ ಕಾಲ ನಡೆಯುವ ಯಾತ್ರೆಯಲ್ಲಿ ಪಹಲ್‌ಗಾಮ್ ಮತ್ತು ಗಂದೇರ್‌ಬಾಲ್ ರಸ್ತೆಗಳಿಂದಲೂ ಅಮರನಾಥ್ ಯಾತ್ರೆಗೆ ಭಕ್ತರು ತೆರಳಲು ಅನುಕೂಲ ಮಾಡಿಕೊಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
 
ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ನಾಳೆ ಅಮರನಾಥ್ ದೇವಾಲಯಕ್ಕೆ ಭೇಟಿ ನೀಡಿ ಪ್ರಥಮ ಪೂಜೆಯನ್ನು ನಡೆಸಲಿದ್ದಾರೆ ಎಂದು ಸರಕಾರಿ ಮೂಲಗಳು ತಿಳಿಸಿವೆ  
 

ವೆಬ್ದುನಿಯಾವನ್ನು ಓದಿ