ಮೋದಿ ಜಪಾನ್‌‌ ಪ್ರವಾಸ್‌ : ರಾಜನಾಥ್‌ ಸಿಂಗ್‌ ನೋಡಿಕೊಳ್ಳಿದ್ದಾರೆ ಮೋದಿಯ ಕೆಲಸ

ಶುಕ್ರವಾರ, 29 ಆಗಸ್ಟ್ 2014 (15:07 IST)
ಶನಿವಾರದಿಂದ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಜಪಾನ್‌ ಪ್ರವಾಸದಲ್ಲಿರಿದ್ದಾರೆ. ದೇಶದಲ್ಲಿ ಮೋದಿಯವರ ಅನುಪಸ್ಥಿತಿಯಲ್ಲಿ ಸರಕಾರದ ಕಾರ್ಯಕಲಾಪಗಳನ್ನು ಗೃಹಮಂತ್ರಿ ರಾಜನಾಥ್‌ ಸಿಂಗ್‌‌ ನೋಡಿಕೊಳ್ಳಲಿದ್ದಾರೆ. ಮೋದಿಯವರ ಅನುಪಸ್ಥಿತಿಯಲ್ಲಿ ಪಕ್ಷದ ಎಲ್ಲಾ ಕಾರ್ಯಕಲಾಪಗಳು ಕೂಡ ರಾಜ್‌ನಾಥ್‌ ಸಿಂಗ್‌‌ರ ಕೈಯಲ್ಲಿರಲಿದೆ. ಈ ಕುರಿತು ಪ್ರಧಾನ ಮಂತ್ರಿ ಕಾರ್ಯಾಲಯದಿಂದ ಪತ್ರಿಕಾ ಪ್ರಕಟಣೆ ಹೊರಡಿಸುವ ಸಾಧ್ಯತೆಗಳಿವೆ ಎಂದು ಬಿಜೆಪಿಯ ಮೂಲಗಳು ತಿಳಿಸಿವೆ. 
 
ಇದಕ್ಕೂ ಮೊದಲು ಶನಿವಾರ ಪ್ರಾರಂಭವಾಗುವ ಜಪಾನ್‌ ಯಾತ್ರೆಯ ಮೊದಲು ಮೋದಿ ಮತ್ತು ಅವರ ಹಳೆಯ ಮಿತ್ರರಾದ ಜಪಾನ್‌‌‌ ದೇಶದ ಪ್ರಧಾನಮಂತ್ರಿ ಶಿಂಜೊ ಆಬೆ ಇಂದು ಮೈಕ್ರೊ ಬ್ಲಾಗಿಂಗ್‌ ಸೈಟ್‌ ಟ್ವಿಟರ್‌‌‌‌‌ ಮೂಲಕ ಮುಖಾಮುಖಿಯಾಗಿದ್ದಾರೆ ಮತ್ತು ಇಬ್ಬರು ನಾಯಕರು ಈ ಪ್ರವಾಸದಿಂದ ಉತ್ಸುಕರಾಗಿ, ' ಈ ಭೇಟಿಯಿಂದ ಭಾರತ ಮತ್ತು ಜಪಾನ್‌‌ನ ಸಾಮರಸ್ಯಕ್ಕೆ ಹೊಸ ಅಧ್ಯಾಯ ಪ್ರಾರಂಭವಾಗಲಿದೆ ' ಎಂದಿದ್ದಾರೆ ಎಂದು ಮೂಲಗಳು ತಿಳಿಸಿವೆ.

ವೆಬ್ದುನಿಯಾವನ್ನು ಓದಿ