ದೆಹಲಿ ಸಿಎಂ ಕೇಜ್ರಿವಾಲ್ ರ ವಕೀಲರ ಕೋಟಿ ಮೊತ್ತದ ಬಿಲ್ ನ್ನು ಜನರೇ ಪಾವತಿಸಬೇಕಂತೆ!

ಮಂಗಳವಾರ, 4 ಏಪ್ರಿಲ್ 2017 (09:21 IST)
ನವದೆಹಲಿ: ದೆಹಲಿ ಸಿಎಂ ಕೇಜ್ರಿವಾಲ್ ರ ಮೇಲೆ ಕೇಂದ್ರ ಸಚಿವ ಅರುಣ್ ಜೇಟ್ಲಿ ಮಾನ ನಷ್ಟ ಮೊಕದ್ದಮೆ ಪ್ರಕರಣ ದಾಖಲಿಸಿ ವಿಚಾರಣೆ ನ್ಯಾಯಾಲಯದಲ್ಲಿದೆ. ಆದರೆ ಇದರ ವಿಚಾರಣೆಗಾಗಿ ಕೇಜ್ರಿವಾಲ್ ಗೆ ವಕೀಲ ರಾಮ್ ಜೇಠ್ಮಲಾನಿ 3 ಕೋಟಿ ಮೊತ್ತದ ಬಿಲ್ ನೀಡಿದ್ದಾರೆಂಬುದು ಬಹಿರಂಗವಾಗಿದೆ.

 

ವಿಶೇಷವೆಂದರೆ ಈ ಹೈ ಪ್ರೊಫೈಲ್ ಪ್ರಕರಣದ ವಿಚಾರಣೆಗೆ ಕೇಜ್ರಿವಾಲ್ ಗೆ ಖ್ಯಾತ ನ್ಯಾಯವಾದಿ ಬಿಜೆಪಿಯವರೇ ಆದ ರಾಮ್ ಜೇಠ್ಮಲಾನಿ 3.42 ಕೋಟಿ ರೂ. ಮೊತ್ತದ ಬಿಲ್ ನೀಡಿದ್ದಾರೆಂದು ಸುದ್ದಿ ವಾಹಿನಿಯೊಂದು ಹೇಳಿದೆ.

 
ಪ್ರತೀ ವಿಚಾರಣೆಗೆ 22 ಲಕ್ಷ ರೂ. ಗಳಂತೆ ಜೇಠ್ಮಲಾನಿ ಬಿಲ್ ನೀಡಿದ್ದಾರಂತೆ. ಇದೀಗ ಈ ಮೊತ್ತವನ್ನು ಜನರಿಂದ ವಸೂಲಿ ಮಾಡಲು ದೆಹಲಿ ಸರ್ಕಾರ ಚಿಂತನೆ ನಡೆಸಿದೆ ಎಂದು ಸುದ್ದಿ ವಾಹಿನಿ ಹೇಳಿಕೊಂಡಿದೆ. ದೆಹಲಿ ಸಿಎಂ ಮನೆ ಸೇರಿದಂತೆ ಎಎಪಿ ನಾಯಕರ ಮನೆ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ ಸಂದರ್ಭದಲ್ಲಿ ವಿತ್ತ ಸಚಿವ ಅರುಣ್ ಜೇಟ್ಲಿ ವಿರುದ್ಧ ಹೇಳಿಕೆ ನೀಡಿದ್ದರ ವಿರುದ್ಧ ಕೇಜ್ರಿವಾಲ್ ಮೇಲೆ ಜೇಟ್ಲಿ ಮಾನ ನಷ್ಟ ಮೊಕದ್ದಮೆ ಹೂಡಿದ್ದರು.

 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   

ವೆಬ್ದುನಿಯಾವನ್ನು ಓದಿ