ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಿಸುವ ಕುರಿತು ಮಾಡಿದ ಪ್ರತಿಜ್ಞೆಯನ್ನು ಶೀಘ್ರದಲ್ಲೇ ಪೂರೈಸಲಾಗುವುದು ಎಂದು ವಿಶ್ವ ಹಿಂದೂ ಪರಿಷತ್ ಮುಖ್ಯಸ್ಥ ಪ್ರವೀಣ್ ತೊಗಾಡಿಯಾ ಭಾನುವಾರ ಹೇಳಿದ್ದಾರೆ.
ಮುಂಬೈನಲ್ಲಿ ನಡೆದ ಸಮಾರಂಭವಂದನ್ನುದ್ದೇಶಿಸಿ ಮಾತನಾಡುತ್ತಿದ್ದ ಅವರು ಹುಡುಗಿಯರಿಗಾಗಿ ಮತ್ತು ಯುವ ಜನಾಂಗಕ್ಕಾಗಿ ದೇಶಾದ್ಯಂತ ಹಾಸ್ಟೆಲ್ ನಿರ್ಮಿಸಲಾಗುವುದು ಅಲ್ಲದೇ ಬಡ ಹಿಂದುಗಳಿಗೆ ಉಚಿತ ವೈದ್ಯಕೀಯ ಸೌಲಭ್ಯ ದೊರಕಿಸುವ ದಿಶೆಯಲ್ಲಿ ತತ್ಪರರಾಗಲಿದ್ದೇವೆ ಎಂದರು.
ವಿಎಚ್‌ಪಿ ಹೇಳಿಕೆ ಪ್ರಕಾರ ಧರ್ಮ ಪರಿವರ್ತನೆ ವಿರುದ್ಧ ಕೇಂದ್ರ ಕಾನೂನು ಜಾರಿಗೆ, ಸಾಧ್ಯವಾದಷ್ಟು ಪ್ರಯತ್ನಗಳನ್ನು ಕೂಡ ಮಾಡಲಾಗುವುದು ಎಂದು ತೊಗಾಡಿಯಾ ಹೇಳಿದ್ದಾರೆ.
ವಿಎಚ್‌ಪಿ ಮುಂದಿಟ್ಟುಕೊಂಡಿರುವ ಗುರಿಗಳ ಬಗ್ಗೆ ಮಾತನಾಡುತ್ತಿದ್ದ ಅವರು ರಾಮಮಂದಿರ ನಿರ್ಮಿಸುತ್ತೇವೆ ಎಂದು ನಾವು ಮಾಡಿದ ವಾಗ್ದಾನವನ್ನು ಶೀಘ್ರದಲ್ಲೇ ಕಾರ್ಯರೂಪಕ್ಕೆ ತರಲಿದ್ದೇವೆ ಎಂದರು.
ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಉಪಸ್ಥಿತರಿದ್ದ ಆರ್‌ಎಸ್ಎಸ್ ಮುಖಂಡ ಭಾಗ್ವತ್ ಹಿಂದೂ ಸಮಾಜ ತನ್ನ ಧರ್ಮದ ಮೌಲ್ಯಗಳ ಪ್ರಕಾರ ನಡೆದುಕೊಳ್ಳಬೇಕು ಎಂದು ಕರೆ ನೀಡಿದ್ದಾರೆ.