ರಾಜಕೀಯ ಬೆಂಬಲವಿಲ್ಲದೆ ರಾಮಮಂದಿರ ನಿರ್ಮಾಣ!

ಶುಕ್ರವಾರ, 31 ಜುಲೈ 2015 (10:34 IST)
ರಾಜಕೀಯದ ಸಹಾಯವಿಲ್ಲದೇ ರಾಮಮಂದಿರ ನಿರ್ಮಾಣ ಮಾಡುತ್ತೇವೆ ಎಂದು ದ್ವಾರಕಾಧೀಶ ಶಂಕರಾಚಾರ್ಯ ಸ್ವರೂಪಾನಂದ ಸ್ವಾಮಿಗಳು ಮತ್ತೆ ಘೋಷಿಸಿದ್ದಾರೆ.
ನಾಸಿಕ್‌ಗೆ ಆಗಮಿಸಿ ಪ್ರಥಮ ಬಾರಿ ಕುಂಭ ಮೇಳದಲ್ಲಿ ಭಾಗವಹಿಸಿದ್ದ ಅವರು ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಮಾಡಿಯೇ ತೀರುತ್ತೇವೆ. ಆದರೆ ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ನೇತೃತ್ವದ ಸರಕಾರ, ಯಾವುದೇ ರಾಜಕೀಯ ಪಕ್ಷಗಳ ಅಥವಾ ರಾಷ್ಟ್ರೀಯ ಸ್ವಯಂ ಸೇವರ ಸಂಘಧ ಸಹಾಯವಿಲ್ಲದೆ ರಾಮಮಂದಿರ ನಿರ್ಮಾಣವಾಗಲಿದೆ ಎಂದು ದೃಢ ಧ್ವನಿಯಲ್ಲಿ ಹೇಳಿದ್ದಾರೆ. 
 
ಶುಕ್ರವಾರ ಬೆಳಿಗ್ಗೆ ಗಂಗಾಘಾಟ್‌ನ ಬಳಿ ಇರುವ ಖೇಮಾಜಿ ಆರೋಗ್ಯ ಧರ್ಮಶಾಲಾದಲ್ಲಿದಲ್ಲಿ ವರದಿಗಾರರ ಜತೆ ಮಾತನಾಡುತ್ತಿದ್ದ ಅವರು, 'ಜನರ ಮತ್ತು ಸಾಧುಸಂತರ ಸಹಾಯದಿಂದ ನಾವು ರಾಮಮಂದಿರವನ್ನು ನಿರ್ಮಾಣ ಮಾಡುತ್ತೇವೆ', ಎಂದು ಶಂಕರಾಚಾರ್ಯ ಹೇಳಿದ್ದಾರೆ. 
 
"ಇಲ್ಲಿಯವರೆಗೆ, ರಾಮಮಂದಿರ ಸಮಸ್ಯೆಗೆ ಯಾರಿಂದಲೂ ನಮಗೆ ಯಾವುದೇ ಪರಿಹಾರ ಸಿಕ್ಕಿಲ್ಲ . ಸಾಧುಗಳು, ಸನ್ಯಾಸಿಗಳ ಮತ್ತು ಜನರ ಬೆಂಬಲದಿಂದ ಅಯೋಧ್ಯೆಯಲ್ಲಿ  ರಾಮಮಂದಿರವನ್ನು ನಿರ್ಮಿಸಲಾಗುವುದು. ಇದಕ್ಕೆ ನಮಗೆ ಯಾವುದೇ ರಾಜಕೀಯ ಪಕ್ಷಗಳ ಸಹಾಯ ಬೇಕಿಲ್ಲ," ಸರಸ್ವತಿ ಎರಡೇ ಬಾರಿಗೆ ಘೋಷಿಸಿದ್ದಾರೆ.
 
ಕಳೆದೆರಡು ತಿಂಗಳುಗಳ ಹಿಂದೆ ರಾಮಲೀಲಾ ಮೈದಾನದಲ್ಲಿ ಹಿಂದೂ ಧರ್ಮ ಸಂಸತ್ತನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಶಂಕರಾಚಾರ್ಯ ಸ್ವರೂಪಾನಂದ ಸರಸ್ವತಿ 'ರಾಮ ಮಂದಿರ ನಿರ್ಮಾಣದ ಕುರಿತು ಮಾತನಾಡುವುದನ್ನು ನಿಲ್ಲಿಸಿ ಎಂದು ಬಿಜೆಪಿ ವಿರುದ್ಧ ಗುಡುಗಿದ್ದರು. ಅಲ್ಲದೇ ಸುಪ್ರೀಂ ಕೋರ್ಟ್ ತೀರ್ಪು ತಮ್ಮ ಪರವಾಗಿ ಬಂದರೆ ರಾಜಕೀಯದ ಸಹಾಯವಿಲ್ಲದೇ ನಾವು ಅಯೋಧ್ಯೆಯಲ್ಲಿ ರಾಮಮಂದಿರವನ್ನು ನಿರ್ಮಿಸುತ್ತೇವೆ', ಎಂದು ಹೇಳಿದ್ದರು. 

ವೆಬ್ದುನಿಯಾವನ್ನು ಓದಿ