ಬಾಬಾ ರಾಮದೇವ್‌ರಿಂದ ಮ್ಯಾಗಿಗೆ ಪರ್ಯಾಯವಾಗಿ ಆಟ್ಟಾ ನೂಡಲ್ಸ್ ಮಾರುಕಟ್ಟೆಗೆ

ಗುರುವಾರ, 3 ಸೆಪ್ಟಂಬರ್ 2015 (20:34 IST)
ಯೋಗಾ ಗುರು ಬಾಬಾ ರಾಮದೇವ್ ಪತಂಜಲಿ ಯೋಗ ಪೀಠದಿಂದ ಆಟ್ಟಾ ನೂಡಲ್ಸ್ ಬ್ರ್ಯಾಂಡ್‌ನ್ನು ಮಾರುಕಟ್ಟೆಗೆ ಪರಿಚಯಿಸಿದ್ದಾರೆ   
 
ಪ್ರಸಕ್ತ ವರ್ಷದ ಆರಂಭದಲ್ಲಿ ಸೀಸದ ಅಂಶ ಹೆಚ್ಚಾಗಿದೆ ಎನ್ನುವ ಕಾರಣದಿಂದ ಮ್ಯಾಗಿಯನ್ನು ನಿಷೇಧಿಸಿ ಆದೇಶಿ ಹೊರಡಿಸಿದ ನಂತರ ಬಾಬಾ ರಾಮದೇವ್ ಅಟ್ಟಾ ನೂಡಲ್ಸ್ ಮಾರುಕಟ್ಟೆಗೆ ಬಿಡುಗಡೆಗೊಳಿಸುವುದಾಗಿ ಘೋಷಿಸಿದ್ದಾರೆ.  
ವರ್ಷಾಂತ್ಯಕ್ಕೆ ದೇಶದ ಮಾರುಕಟ್ಟೆಗೆ ಮತ್ತೊಮ್ಮೆ ಲಗ್ಗೆ ಇಡುವ ಕುರಿತಂತೆ ನೆಸ್ಲೆ ಕಂಪೆನಿ ಯೋಚನೆಯಲ್ಲಿರುವ ಸಂದರ್ಭದಲ್ಲಿಯೇ  ಇಂದು ಬಾಬಾ ರಾಮದೇವ್ ಆಟ್ಟಾ ನೂಡಲ್ಸ್ ಮಾರುಕಟ್ಟೆಗೆ ತಂದಿದ್ದಾರೆ. 
 
ನನ್ನ ಆಟ್ಟಾ ನೂಡಲ್ಸ್‌ನಲ್ಲಿ ನೈದಾ ಇರುವುದಿಲ್ಲ . ಮಕ್ಕಳಿಗೆ ಪ್ರಿಯವಾಗಿದ್ದ ಮ್ಯಾಗಿಗೆ ಪರ್ಯಾಯವಾಗಿ ಆರೋಗ್ಯಯುಕ್ತವಾಗಿವಾಗಿರುತ್ತದೆ. ಮುಂಬರುವ ದಿನಗಳಲ್ಲಿ ಕೊಂಪ್ಲಾನ್, ಹಾರ್ಲಿಕ್ಸ್ ಮತ್ತು ಬೋರ್ನವೀಟಾಗೆ ಬದಲಾಗಿ ಪವರ್‌ವೀಟಾ ಬ್ರ್ಯಾಂಡ್ ಮಾರುಕಟ್ಟೆಗೆ ಬಿಡುಗಡೆಗೊಳಿಸಲಾಗುವುದು ಎಂದು ಬಾಬಾ ರಾಮದೇವ್ ತಿಳಿಸಿದ್ದಾರೆ.  
 
ಭಾರತೀಯರು ವಿಷಯುಕ್ತವಾದ ವಿದೇಶಿ ಉತ್ಪನ್ನಗಳನ್ನು ಖರೀದಿಸದೆ ಸ್ವದೇಶಿ ಉತ್ಪನ್ನಗಳನ್ನು ಖರೀದಿಸುವತ್ತ ಹೆಚ್ಚು ಗಮನಹರಿಸಬೇಕು ಎಂದು ಯೋಗಾ ಗುರು ಬಾಬಾ ರಾಮದೇವ್ ಕರೆ ನೀಡಿದ್ದಾರೆ. 

ವೆಬ್ದುನಿಯಾವನ್ನು ಓದಿ