ನರೇಂದ್ರ ಮೋದಿಯನ್ನು ಪ್ರಧಾನಿಯನ್ನಾಗಿಸಿ ಆಶ್ರಮಕ್ಕೆ ಮರಳಿದ ಬಾಬಾ ರಾಮದೇವ್

ಮಂಗಳವಾರ, 20 ಮೇ 2014 (14:06 IST)
ಬಿಜೆಪಿ ಪಕ್ಷವನ್ನು ಕೇಂದ್ರದಲ್ಲಿ ಅಧಿಕಾರಕ್ಕೆ ತರುವ ಉದ್ದೇಶದಿಂದ ಬಾರಿ ಹೋರಾಟ ನಡೆಸಿದ್ದ ಯೋಗಾ ಗುರು ಬಾಬಾ ರಾಮದೇವ್ ಇದೀಗ, ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಿದ್ದರಿಂದ ನಿರಾಳರಾಗಿ ಪತಂಜಲಿ ಆಶ್ರಮ ಯೋಗ ಪೀಠಕ್ಕೆ ಮರಳಿದ್ದಾರೆ  
 
ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಪ್ರಧಾನಿಯಾಗುವವರೆಗೆ ಆಶ್ರಮವನ್ನು ಪ್ರವೇಶಿಸುವುದಿಲ್ಲ ಎಂದು ಘೋಷಿಸಿದ್ದ ಬಾಬಾ ರಾಮದೇವ್, ಇಂದು ಭಾರಿ ಮೆರವಣಿಗೆಯಲ್ಲಿ ತಮ್ಮ ಆಶ್ರಮವನ್ನು ಪ್ರವೇಶಿಸಿದ್ದಾರೆ.
 
ಭಾರತ್ ಸ್ವಾಭಿಮಾನ್ ಯಾತ್ರೆಯ ಅಂಗವಾಗಿ ಆಯೋಜಿಸಿದ ಕಾರ್ಯಕ್ರಮದಲ್ಲಿ ಮಾತನಾಡಿದ ಬಾಬಾ ರಾಮದೇವ್, ಚುನಾವಣೆ ಸಂದರ್ಭದಲ್ಲಿ 14 ಲಕ್ಷ ಕಿ.ಮೀಗಳಷ್ಟು ದೂರವನ್ನು ಕ್ರಮಿಸಿದ್ದು, ಸುಮಾರು 15 ಕೋಟಿ ಮತದಾರರನ್ನು ಭೇಟಿ ಮಾಡಿದ್ದೇನೆ. ದೇಶಾದ್ಯಂತ 11ಸಾವಿರ ಸಭೆಗಳನ್ನು ಶಿಬಿರಗಳನ್ನು ಆಯೋಜಿಸಿದ್ದೇನೆ ಎಂದು ತಿಳಿಸಿದ್ದಾರೆ. 
 
ಬಿಜೆಪಿ ಲೋಕಸಭೆಯ ಪ್ರಚಾರ ಸಮಿತಿ ಮೋದಿಯನ್ನು ಪ್ರಧಾನಿ ಅಭ್ಯರ್ಥಿಯಾಗಿ ಘೋಷಿಸುವ ಮುನ್ನವೇ ನಾನು ಅವರನ್ನು ಭವಿಷ್ಯದ ಪ್ರಧಾನಿ ಎಂದು ಕರೆದಿದ್ದೆ. ಮೋದಿಯನ್ನು ಬಿಜೆಪಿ ಅಭ್ಯರ್ಥಿಯನ್ನಾಗಿ ಘೋಷಿಸಿದ್ರೆ ಮಾತ್ರ ಬೆಂಬಲ ನೀಡುವುದಾಗಿ ಬಿಜೆಪಿ ಹೈಕಮಾಂಡ್‌ಗೆ ಮನವಿ ಮಾಡಿದ್ದೆ ಎಂದರು. 
 
ಪತಂಜಲಿ ಆಶ್ರಮದಲ್ಲಿ ದೇಶದ ಎಲ್ಲಾ ಭಾಗಗಳಿಂದ ಖ್ಯಾತ ಸಾಧು ಸಂತರು ಪಾಲ್ಗೊಂಡಿದ್ದು, ನರೇಂದ್ರ ಮೋದಿ ಪ್ರಧಾನಿಯಾಗಿರುವುದಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ ಎಂದು ಯೋಗಾ ಗುರು ಬಾಬಾ ರಾಮದೇವ್ ಹೇಳಿದ್ದಾರೆ.
 
 

ವೆಬ್ದುನಿಯಾವನ್ನು ಓದಿ