ಪೀಡಿತೆಯನ್ನು ಮದುವೆಯಾಗುತ್ತೇನೆಂದ ರೇಪ್ ಆರೋಪಿಗೆ ಜಾಮೀನು

ಶನಿವಾರ, 23 ಮೇ 2015 (17:30 IST)
ತಾನು ಪ್ರೀತಿಸುತ್ತಿದ್ದ ಯುವತಿಯ ಮೇಲೆ ಅತ್ಯಾಚಾರವೆಸಗಿ ಜೈಲು ಪಾಲಾಗಿದ್ದ ವ್ಯಕ್ತಿ ಆಕೆಯನ್ನು ಮದುವೆಯಾಗುವುದಾಗಿ ಭರವಸೆ ನೀಡಿದ ಪರಿಣಾಮ ಮುಂಬೈ ಹೈಕೋರ್ಟ್ ಆತನಿಗೆ ನಿರೀಕ್ಷಣಾ ಜಾಮೀನು ನೀಡಿದೆ. 

ಆರೋಪಿ ಜೈವಂತ್ ಜಾಧವ್ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎ.ಎಸ್. ಗಡ್ಕರಿ ಆತನಿಗೆ ಜಾಮೀನು ನೀಡಿದ್ದಾರೆ. ಆತನ ಮೇಲೆ ಎಪ್ರಿಲ್ 4 ರಂದು ಪ್ರೀತಿಸುತ್ತಿದ್ದ ಯುವತಿಗೆ ವಂಚನೆ ಮಾಡಿ ಅತ್ಯಾಚಾರ ಎಸಗಿದ ದೂರು ದಾಖಲಾಗಿತ್ತು. 
 
ವಕೀಲರ ಪ್ರಕಾರ ತನ್ನ ಸ್ನೇಹಿತರೊಬ್ಬರ ಮೂಲಕ ಯುವತಿಗೆ ಜಾಧವ್ ಪರಿಚಯವಾಗಿತ್ತು. ಪರಿಚಯ ಪ್ರೇಮವಾಗಿ ಬಲವಂತವಾಗಿ ಆತ ದೈಹಿಕವಾಗಿ ಆಕೆಯನ್ನು ಬಳಸಿಕೊಂಡಿದ್ದ.
 
ಅವರ ಪ್ರೇಮ ಸಂಬಂಧದ ಕುರಿತು ತಿಳಿದ ಯುವತಿಯ ಪೋಷಕರು ಯುವಕನ ಕುಟುಂಬದವರ ಬಳಿ ಮದುವೆಯ ಕುರಿತು ಪ್ರಸ್ತಾಪಿಸಿದಾಗ ಅವರದಕ್ಕೆ ಒಪ್ಪಿರಲಿಲ್ಲ. ಈ ಕಾರಣದಿಂದ ಯುವತಿಯ ಪೋಷಕರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಳು. 
 
ತಾನು ಯುವತಿಯನ್ನು ಬಲವಂತವಾಗಿ ಬಳಸಿಕೊಂಡಿರಲಿಲ್ಲ. ಸಹಮತದಿಂದಲೇ ನಮ್ಮಿಬ್ಬರಲ್ಲಿ ದೈಹಿಕ ಸಂಬಂಧ ಏರ್ಪಟ್ಟಿಟ್ಟಿತ್ತು  ಎಂದು ಜಾದವ್ ನಿರೀಕ್ಷಣಾ ಜಾಮೀನಿಗಾಗಿ ಅರ್ಜಿ ಸಲ್ಲಿಸಿದ್ದ. 
 
ವಿಚಾರಣೆ ಸಂದರ್ಭದಲ್ಲಿ ಹೈಕೋರ್ಟ್ ಆರೋಪಿಯ ಬಳಿ ಪೀಡಿತೆಯನ್ನು ಮದುವೆಯಾಗುತ್ತೀಯಾ ಎಂದು ಪ್ರಶ್ನಿಸಿದೆ. 
 
ಆರೋಪಿ ಇದಕ್ಕೊಪ್ಪಿದ, ಆ ಸಂದರ್ಭದಲ್ಲಿ ಕೋರ್ಟ್‌ನಲ್ಲಿ ಹಾಜರಿದ್ದ ಆರೋಪಿ ತಂದೆ ಕೂಡ ನಾವು ಆಕೆಯನ್ನು ಸೊಸೆಯಾಗಿ ಸ್ವೀಕರಿಸುತ್ತೇವೆ ಮತ್ತು ಭವಿಷ್ಯದಲ್ಲಿ ಆಕೆಗೆ ಯಾವುದೇ ರೀತಿಯಲ್ಲಿ ತೊಂದರೆ ನೀಡಲಾರೆವು ಎಂದು ಹೇಳಿಕೆ ನೀಡಿದ ಹಿನ್ನೆಲೆಯಲ್ಲಿ ಕೋರ್ಟ್ ಆರೋಪಿಗೆ ಜಾಮೀನು ನೀಡಲು ಒಪ್ಪಿತು. 

ವೆಬ್ದುನಿಯಾವನ್ನು ಓದಿ