ಸೇಡಿಗೆ ಸೇಡು: ಅತ್ಯಾಚಾರ ಆರೋಪಿಯ ಸಹೋದರಿಯನ್ನು ಅಪಹರಿಸಿ ಗ್ಯಾಂಗ್‌ರೇಪ್

ಮಂಗಳವಾರ, 2 ಸೆಪ್ಟಂಬರ್ 2014 (13:09 IST)
ಯುವತಿಯ ಮೇಲೆ ಅತ್ಯಾಚಾರವೆಸಗಿದ ಆರೋಪಿಯ ಸಹೋದರಿಯನ್ನು ಅಪಹರಿಸಿ ಅತ್ಯಾಚಾರವೆಸಗಿ ಸೇಡು ತೀರಿಸಿಕೊಂಡು ಘಟನೆ ಉತ್ತರಪ್ರದೇಶದ ಮುಜಾಫರ್‌ನಗರ್ ಜಿಲ್ಲೆಯಲ್ಲಿ ನಡೆದಿದೆ.
 
ಅತ್ಯಾಚಾರಕ್ಕೊಳಗಾದ ಯುವತಿಯ ಸಹೋದರನ ವಿರುದ್ಧ ಆಗಸ್ಟ್ 25 ರಂದು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. 
 
ಯುವತಿಯ ಮೇಲೆ ನಡೆದ ಅತ್ಯಾಚಾರ ಘಟನೆಗೆ ಸಂಬಂಧಿಸಿದಂತೆ ಗ್ರಾಮಸ್ಥರು ಕಕ್ರೌಲಿ ಪೊಲೀಸ್ ಠಾಣೆ ಮುಂದೆ ಭಾರಿ ಪ್ರತಿಭಟನೆ ನಡೆಸಿದ್ದಾರೆ.
 
ಕಳೆದ ರಾತ್ರಿ ಐದು ಮಂದಿ ಆರೋಪಿಗಳು ಅತ್ಯಾಚಾರ ಆರೋಪಿಯ ಮನೆಗೆ ನುಗ್ಗಿ ಆತನ ಸಹೋದರಿಯನ್ನು ಅಪಹರಿಸಿ ಸಾಮೂಹಿಕ ಅತ್ಯಾಚಾರವೆಸಗಿದ್ದಾರೆ. ನಂತರ ಯುವತಿಯನ್ನು ಮಿರ್ಜಾ ಟಿಲ್ಲಾ ಪ್ರದೇಶದಲ್ಲಿ ಎಸೆದು ಪರಾರಿಯಾಗಿದ್ದಾರೆ. 
 

ವೆಬ್ದುನಿಯಾವನ್ನು ಓದಿ