ಅತ್ಯಾಚಾರ ಆರೋಪಿ ಹತ್ಯೆ ಪ್ರಕರಣ: ನಿಷೇಧಾಜ್ಞೆ ಜಾರಿ

ಶುಕ್ರವಾರ, 6 ಮಾರ್ಚ್ 2015 (10:56 IST)
ಜೈಲಿಗೆ ನುಗ್ಗಿ ಅತ್ಯಾಚಾರ ಆರೋಪಿಯೋರ್ವನನ್ನು ಹತ್ಯೆಗೈದ ಪ್ರಕರಣದಿಂದ ಪರಿಸ್ಥಿತಿ ಹದಗೆಟ್ಟಿದ್ದು, ನಿಷೇಧಾಜ್ಞೆಯನ್ನು ಜಾರಿಗೊಳಿಸಲಾಗಿದೆ. 
 
ಪ್ರಕರಣ ಹಿನ್ನೆಲೆ ನಗರದಲ್ಲಿ ಸಾರ್ವಜನಿಕರ ಸ್ಥಿತಿ ಅಸ್ತವ್ಯಸ್ತವಾಗಿರುವ ಹಿನ್ನೆಲೆಯಲ್ಲಿ ನಿಷೇಧಾಜ್ಞೆಯನ್ನು ಜಾರಿಗೊಳಿಸಲಾಗಿದ್ದು, ರಾಜ್ಯದ ಮುಖ್ಯಮಂತ್ರಿ ಸಿ.ಟಿ. ಜಿಲಾಂಗ್ ಅವರು ಪ್ರಕರಣದ ಸಂಪೂರ್ಣ ತನಿಖೆಗೆ ಆದೇಶಿಸಿದ್ದಾರೆ. ಇನ್ನು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಕೇಂದ್ರ ಗೃಹ ಸಚಿವಾಲಯ ಪರ್ಕರಣಕ್ಕೆ ಸಂಬಂಧಿಸಿದಂತೆ ವಿಸ್ತೃತ ವರದಿಯನ್ನು ಸಲ್ಲಿಸುವಂತೆ ರಾಜ್ಯ ಸರ್ಕಾರಕ್ಕೆ ಸೂಚಿಸಿದೆ ಎನ್ನಲಾಗಿದೆ.  
 
ಪ್ರಕರಣದ ಹಿನ್ನೆಲೆ: ಯುವತಿಯೋರ್ವಳನ್ನು ಅತ್ಯಾಚಾರ ಎಸಗಿದ್ದ ಎಂಬ ಆರೋಪದ ಮೇಲೆ ಸಯ್ಯದ್ ಫರೀದ್ ಖಾನ್ ಎಂಬ ಆರೋಪಿಯನ್ನು ಬಂಧಿಸಲಾಗಿತ್ತು. ಆದರೆ ವಿಷಯ ತಿಳಿದ ಸಾರ್ವಜನಿಕರು ಜೈಲಿನ ಒಳ ನುಗ್ಗಿ ಅತ್ಯಾಚಾರಿಯನ್ನು ಹೊರ ಎಳಎದು ತಂದು ಬೆತ್ತಲೆ ಮೆರವಣಿಗೆ ಮಾಡಿದ್ದರು. ಅಷ್ಟೇ ಅಲ್ಲದೆ ಮನ ಬಂದಂತೆ ಥಳಿಸಿ ಹತ್ಯೆಗೈದಿದ್ದರು. ಈ ಹಿನ್ನೆಲೆಯಲ್ಲಿ ಕೇಂದ್ರ ಗೃಹ ಸಚಿವಾಲಯ ಸಂಪೂರ್ಣ ವರದಿ ಸಲ್ಲಿಸುವಂತೆ ಸೂಚಿಸಿದೆ. 
 
ಇನ್ನು ಉದ್ರಿಕ್ತಗೊಂಡ ಸಾರ್ವಜನಿಕರ ಗುಂಪು ಈ ಕೃತ್ಯವನ್ನು ಎಸಗಿದ್ದು, ಈ ಸಂಧರ್ಭದಲ್ಲಿ 1500ಕ್ಕೂ ಹೆಚ್ಚು ಮಂದಿ ಭಾಗವಹಿಸಿದ್ದರು ಎನ್ನಲಾಗಿದೆ. 

ವೆಬ್ದುನಿಯಾವನ್ನು ಓದಿ