ಹಸಿ ಬಾಣಂತಿ ಮೇಲೆ ಅತ್ಯಾಚಾರವೆಸಗಿದ ದುಷ್ಕರ್ಮಿ

ಭಾನುವಾರ, 14 ಫೆಬ್ರವರಿ 2016 (12:32 IST)
ಪೊಲೀಸ್ ಅಧಿಕಾರಿ ಪತ್ನಿ ಮಗುವಿಗೆ ಜನ್ಮ ನೀಡಿದ ಕೆಲವೇ ಗಂಟೆಗಳಲ್ಲೇ ದುಷ್ಕರ್ಮಿಯೊಬ್ಬ ಅತ್ಯಾಚಾರ ಮಾಡಿದ ಘಟನೆ ಹರ್ಯಾಣದ ಬಹದ್ದೂರ್‌ಘಡದಲ್ಲಿ ವರದಿಯಾಗಿದೆ. ಹರಿಯಾಣದ ಖಾಸಗಿ ಆಸ್ಪತ್ರೆಯಲ್ಲಿ ಐಸಿಯುನಲ್ಲಿ ಬಾಣಂತಿಗೆ ಚಿಕಿತ್ಸೆ ನೀಡುವ ಸಂದರ್ಭದಲ್ಲಿ  ಈ ಹೀನಕೃತ್ಯ ನಡೆದಿದೆ.  ನಿನ್ನೆ ಬೆಳಗಿನ ಜಾವ ಐಸಿಯು ಬಳಿ ಅಡ್ಡಾಡುತ್ತಿದ್ದ ವ್ಯಕ್ತಿಯೊಬ್ಬ ಬಾಣಂತಿ ಮೇಲೆ ಅತ್ಯಾಚಾರವೆಸಗುವ ಪೈಶಾಚಿಕ ಕೃತ್ಯವೆಸಗಿದ್ದಾನೆ.

ಅತ್ಯಾಚಾರಕ್ಕೊಳಗಾಗಿರುವ 22 ವರ್ಷದ ಮಹಿಳೆಗೆ ಸಿಸೇರಿಯನ್‌ ಮೂಲಕ ಹೆರಿಗೆಯಾದ ಬಳಿಕ ಐಸಿಯುನಲ್ಲಿ ಆರೈಕೆ ಮಾಡಲಾಗುತ್ತಿತ್ತು. ಶಂಕಿತ ಆರೋಪಿಯ ದೃಶ್ಯಾವಳಿ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ.

ಸಿಸಿಟಿವಿ ದೃಶ್ಯಾವಳಿಗಳಲ್ಲಿ ಆರೋಪಿಯು ಬೆಳಗಿನ ಜಾವದ ವೇಳೆಗೆ ಆಸ್ಪತ್ರೆಗೆ ಆಗಮಿಸಿ ಕೃತ್ಯ ಎಸಗಿರುವುದು ದಾಖಲಾಗಿದೆ.  ಉದ್ದೇಶಪೂರ್ವಕವಾಗಿ ಅತ್ಯಾಚಾರ ಮಾಡಲಾಗಿದೆಯೇ ಎಂಬ ಕುರಿತು ಪೊಲೀಸರು ತನಿಖೆ ನಡೆಸಿದ್ದಾರೆ. 
 

ವೆಬ್ದುನಿಯಾವನ್ನು ಓದಿ