ನೇಣಿಗೆ ಶರಣಾಗಿ ಜೀವ ಉಳಿಸುವಂತೆ ತಂದೆಗೆ ಕೋರಿದ ಪುತ್ರಿ

ಬುಧವಾರ, 20 ಆಗಸ್ಟ್ 2014 (19:00 IST)
ಪತಿ ತನ್ನ ಜೊತೆ ಇರಬೇಡ ಎಂದು ಹೇಳಿದ ಕಾರಣ ನೊಂದ ಪತ್ನಿ ಸಿಟ್ಟಿನಿಂದ ನೇಣು ಬಿಗಿದುಕೊಂಡಿದ್ದಾಳೆ. ನೇಣಿಗೇರಿದಾಗ ಆಕೆಯ ಮನಸ್ಸಿನಲ್ಲಿ ಬದುಕುವ ಆಸೆಯಾಗಿ ತನ್ನನ್ನು ಬದುಕಿಸುವಂತೆ ತಂದೆಗೆ ಜೋರಾಗಿ ಕೂಗಿದ್ದಾಳೆ.. ಕುಟುಂದವರು ಅವಳನ್ನು ನೇಣಿನಿಂದ ಕೆಳಗಿಳಿಸಿ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ, ಆದರೆ ವೈದ್ಯರು ಆಕೆಯ ಪ್ರಾಣ ಉಳಿಸುವಲ್ಲಿ ವಿಫಲರಾದ ಘಟನೆ ವರದಿಯಾಗಿದೆ. 
 
ಥಟಿಪುರ್‌ ಪೊಲೀಸರ ಪ್ರಕಾರ, ಸುರೇಶ್‌ ನಗರದ ನಿವಾಸಿಯಾದ ಜಯಸಿಂಗ್‌ ಜಾಟವ್‌‌ನ ಮಗಳು ಪ್ರೀತಿ ಉರ್ಫ ಮಾಲತಿ (23) ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಪ್ರೀತಿ ತನ್ನ ಪತಿ ಮಹೇಂದ್ರನೊಂದಿಗಿನ ವಿರಸದಿಂದಾಗಿ ಸುಮಾರು ಎರಡೂವರೆ ವರ್ಷ ತವರು ಮನೆಯಲ್ಲಿಯೇ ಇದ್ದಳು. ತನ್ನ ಅಳಿಯ ಪಿಎಚ್‌‌‌‌ಇ  ನಲ್ಲಿದ್ದಾನೆ.  ಪತ್ನಿ ಪ್ರೀತಿಗೆ ತನ್ನ ಪತಿ ಮಹೇಂದ್ರ ತನ್ನ ಮಾಲೀಕಳಾದ ಜೆಠಾನಿ ಜೊತೆ ಅನೈತಿಕ ಸಂಬಂಧ ಹೊಂದಿದ್ದಾನೆ ಎಂದು ಸಂಶಯಿಸಿ  ಪತಿಯೊಂದಿಗೆ ಜಗಳವಾಡುತ್ತಿದ್ದಳು. ಮಾವನ ಮನೆಯವರು ಸಮಸ್ಯೆಯನ್ನು ಪರಿಹರಿಸುವುದನ್ನು ಬಿಟ್ಟು ಆಕೆಯ ಮೇಲೆ ಹಲವಾರು ಬಾರಿ ಹಲ್ಲೆ ನಡೆಸಿದ್ದಾರೆ. ಇದರಿಂದ ನೊಂದ ಪ್ರೀತಿ ತವರುಮನೆಗೆ ವಾಪಸಾಗಿದ್ದಾಳೆ ಎಂದು ಪ್ರೀತಿಯ ತಂದೆ ಜಯ್‌ಸಿಂಗ್‌ ಹೇಳಿದ್ದಾನೆ. 
 
ಸೋಮವಾರ ಕೃಷ್ಣ ಜನ್ಮಾಷ್ಟಮಿಯಿದ್ದ ಕಾರಣ ಪ್ರೀತಿಯ ತಂದೆ ಆಕೆಗಾಗಿ ಹಣ್ಣುಗಳನ್ನು ತರಲು ಹೊರಗಡೆ ಹೋದಾಗ, ಆಕೆ ಮನೆಯಲ್ಲಿ ಒಬ್ಬಳೆ ಇದ್ದಳು. ತಂದೆ ಮನೆಗೆ ಮರಳಿ ಬಂದಾಗ ಮಗಳು ಕೋಣೆ ಬಂದ್‌ ಮಾಡಿಕೊಂಡು ಸೀರೆಯಿಂದ ನೇಣು ಬಿಗಿದುಕೊಂಡಿದ್ದಳು. ಆಕೆಯನ್ನು ಉಳಿಸಲು ಬಾಗಿಲು ಮುರಿದು ಒಳಗಡೆ ಹೋದಾಗ, ಪ್ರೀತಿ ಇನ್ನು ಬದುಕಿದ್ದಳು. ಕುಟುಂದವರು ಆಕೆಯನ್ನು ನೇಣಿನಿಂದ ಕೆಳಗಿಳಿಸಿ ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ.ಆದರೆ, ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾಳೆ. 
 
ಜಯಸಿಂಗ್ ಪುತ್ರ ಕಪಿಲ್‌‌ನ ಪ್ರಕಾರ, ತನ್ನ ಭಾವ ಮಹೇಂದ್ರ ಆಗಸ್ಟ್‌‌ 16 ರಂದು ಪ್ರೀತಿಯನ್ನು ಫುಲ್‌ಬಾಗ್‌‌‌ಗೆ ಕರೆದಿದ್ದ. ಸಹೋದರಿ ಪತಿಯೊಂದಿಗೆ ಇರುವದಾಗಿ ಒತ್ತಾಯಿಸಿದ್ದಾಳೆ, ಆದರೆ ಮಹೇಂದ್ರ ಮಾತ್ರ ನಿರಾಕರಿಸಿದ್ದಾನೆ.ಕಳೆದ ರಾತ್ರಿ ಮಹೇಂದ್ರ ಜೊತೆಗೆ ಪ್ರೀತಿ ಫೋನ್‌‌‌‌‌ನಲ್ಲಿ ಮಾತನಾಡುತ್ತಿದ್ದಳು ಎಂದು ಕುಟುಂಬದವರು ತಿಳಿಸಿದ್ದಾರೆ. 
 
ಮಹೇಂದ್ರ ತನ್ನ ಹೆಂಡತಿ ಪ್ರೀತಿಯ ಮಾತು ಕೇಳಲು ಕೂಡಾ ಸಿದ್ದನಿರಲಿಲ್ಲ. ಎರಡು ವರ್ಷದ ಮಗ ಧೃವ್‌‌ನ ಜನ್ಮದಿನದಂದು ಪ್ರೀತಿ ಮಹೇಂದ್ರನನ್ನು ಮನೆಗೆ ಕರೆದರು ಕೂಡ ಬಂದಿರಲಿಲ್ಲ ಎಂದು ಪರಿವಾರದವರು ಆರೋಪಿಸಿದ್ದಾರೆ. 

ವೆಬ್ದುನಿಯಾವನ್ನು ಓದಿ