ಬಾಯ್‌ಫ್ರೆಂಡ್‌ನಿಂದ ರೇಪ್‌ಗೊಳಗಾದ ಬಾಲಕಿಯನ್ನು ಅಪಹರಿಸಿ ಗ್ಯಾಂಗ್‌ರೇಪ್ ಎಸಗಿದ ಕಾಮುಕರು

ಬುಧವಾರ, 3 ಫೆಬ್ರವರಿ 2016 (15:03 IST)
ಪ್ರೀತಿಸಿದ ಯುವಕನೊಂದಿಗೆ ಓಡಿ ಹೋಗಿ ವಿವಾಹವಾಗಿ ಸುಖದಾಂಪತ್ಯದ ಸವಿಯನ್ನು ಅನುಭವಿಸಬೇಕು ಎಂದು ಕನಸು ಕಂಡಿದ್ದ ಬಾಲಕಿಯೊಬ್ಬಳ ಕನಸು ನುಚ್ಚು ನೂರಾಗಿದೆ. ಆಕೆಯ ಪ್ರೇಮಿ ಅತ್ಯಾಚಾರವೆಸಗಿ ಪರಾರಿಯಾಗಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
 
ಪ್ರೇಮಿಯ ವರ್ತನೆಯಿಂದ ಆತಂಕಗೊಂಡಿದ್ದ ಯುವತಿಯ ಮೇಲೆ ಇತರ ಇಬ್ಬರು ಅಪರಿಚಿತ ಆರೋಪಿಗಳು ಅತ್ಯಾಚಾರವೆಸಗಿದ ದಾರುಣ ಘಟನೆ ವರದಿಯಾಗಿದೆ.
 
ಆರೋಪಿ ಪ್ರಿಯತಮ ನಿರುಲ್ ಯಾದವ್, ಪ್ರಿಯತಮೆಯಾಗಿದ್ದ 14 ವರ್ಷದ ಬಾಲಕಿಯ ಮೇಲೆ ಅತ್ಯಾಚಾರವೆಸಗಿದ ನಂತರ ದೈಹಿಕವಾಗಿ ಹಲ್ಲೆ ಮಾಡುತ್ತಿರುವ ಸಂದರ್ಭದಲ್ಲಿ ಸ್ಥಳಕ್ಕೆ ಬಂದ ಇಬ್ಬರು ಆರೋಪಿಗಳು, ಇಬ್ಬರನ್ನು ಥಳಿಸಿ, ನಂತರ ನಿರುಲ್ ಯಾದವ್‌ನನ್ನು ಮರಕ್ಕೆ ಕಟ್ಟಿ ಹಾಕಿ ಬಾಲಕಿನ್ನು ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿದ್ದಾರೆ.
 
ಆರೋಪಿಗಳು ಬಾಲಕಿಯನ್ನು ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಸಾಮೂಹಿಕ ಅತ್ಯಾಚಾರವೆಸಗಿದ್ದಾರೆ. ಆರೋಪಿಗಳಿಂದ ತಪ್ಪಿಸಿಕೊಂಡ ಬಾಲಕಿ ಮನೆಯಲ್ಲಿದ್ದ ಪೋಷಕರಿಗೆ ಘಟನೆಯ ಬಗ್ಗೆ ಮಾಹಿತಿ ನೀಡಿದ್ದಾಳೆ. ಪೋಷಕರು ಕೂಡಲೇ ಪೊಲೀಸ್ ಠಾಣೆಗೆ ತೆರಳಿ ಆರೋಪಿಗಳ ವಿರುದ್ಧ ಅತ್ಯಾಚಾರ, ಅಪಹರಣ ದೂರು ದಾಖಲಿಸಿದ್ದಾರೆ.
 
ಆರೋಪಿ ನಿರುಲ್ ಯಾದವ್‌ನನ್ನು ಪೊಲೀಸರು ಬಂಧಿಸಿದ್ದು, ಇತರ ಇಬ್ಬರು ಆರೋಪಿಗಳ ಬಂಧನಕ್ಕಾಗಿ ಜಾಲ ಬೀಸಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ವೆಬ್ದುನಿಯಾವನ್ನು ಓದಿ