ಮೆಟ್ರೋ ನಿಲ್ದಾಣದಲ್ಲಿ ಮೃತ ಭ್ರೂಣಕ್ಕೆ ಜನ್ಮ ನೀಡಿದ ರೇಪ್ ಪೀಡಿತೆ

ಸೋಮವಾರ, 15 ಫೆಬ್ರವರಿ 2016 (12:10 IST)
ತನ್ನ ಗೆಳೆಯನಿಂದಲೇ ಅತ್ಯಾಚಾರಕ್ಕೊಳಗಾಗಿದ್ದ ಅಪ್ರಾಪ್ತ ಯುವತಿಯೋರ್ವಳು ಗರ್ಭಪಾತಕ್ಕೆಂದು ಆಸ್ಪತ್ರೆಗೆ ಹೋಗುತ್ತಿದ್ದಾಗ ಮಾರ್ಗಮಧ್ಯದಲ್ಲಿಯೇ ಮೃತ ಭ್ರೂಣಕ್ಕೆ ಜನ್ಮ ನೀಡಿದ ಘಟನೆ ನವದೆಹಲಿಯ ಕೇಶವ ಪುರಂ ಮೆಟ್ರೋ ನಿಲ್ದಾಣದಲ್ಲಿ ನಡೆದಿದೆ. 

ಪೊಲೀಸರು ಹೇಳುವ ಪ್ರಕಾರ ಬಾಲಕಿಗೆ ಗರ್ಭಪಾತವಾದಾಗ ಆರೋಪಿ ಮತ್ತು ಆತನ ಸ್ನೇಹಿತ ಸಹ ಜತೆಗಿದ್ದರು. ಮೆಟ್ರೋ ನಿಲ್ದಾಣದ ಶೌಚಾಲಯದಲ್ಲಿ ಬಾಲಕಿ ತೀವ್ರ ರಕ್ತಸ್ರಾವದಿಂದ ಕುಸಿದು ಬಿದ್ದಿದ್ದಾಳೆ. ಅದನ್ನು ನೋಡಿದ ಮೆಟ್ರೋ ಸಿಬ್ಬಂದಿ ಆಕೆಯ ಸಹಾಯಕ್ಕೆ ಧಾವಿಸಿದ್ದಾರೆ.
 
ಮೆಟ್ರೋ ನಿಲ್ದಾಣದ ವೈದ್ಯಕೀಯ ಸಿಬ್ಬಂದಿ ಆಕೆ ಬೆಳವಣಿಗೆ ಹೊಂದಿರದ ಮೃತ ಭ್ರೂಣವನ್ನು ಜನ್ಮ ನೀಡಿದ್ದಾಳೆ. ಅದಕ್ಕೆ 5 ರಿಂದ 6 ತಿಂಗಳಾಗಿರಬೇಕು ಎಂದು ಹೇಳಿದ್ದಾರೆ. 
 
ಆರೋಪಿ ಗುಲ್ಶಾನ್ ಮತ್ತು ಆತನ ಸ್ನೇಹಿತನನ್ನು ಪೊಲೀಸರು ಬಂಧಿಸಿದ್ದು,ಅವರ ವಿರುದ್ಧ ಅಪಹರಣ ಮತ್ತು ಅತ್ಯಾಚಾರ ಆರೋಪ ದಾಖಲಾಗಿದೆ. 
 
ಈ ಕುರಿತು ಪ್ರತಿಕ್ರಿಯಿಸಿರುವ ಪೀಡಿತ ಬಾಲಕಿ ಕೆಲ ತಿಂಗಳುಗಳ ಹಿಂದೆ ನನಗಾತನ ಪರಿಚಯವಾಗಿತ್ತು. ಕೆಲಸ ಕೊಡಿಸುವ ಆಮಿಷ ಒಡ್ಡಿ ಆತ ನನ್ನ ಮೇಲೆ ಅತ್ಯಾಚಾರವೆಸಗಿದ ಮತ್ತು ವೇಶ್ಯಾವಾಟಿಕೆಗೆ ದೂಡಿದ. ನಾನು ಗರ್ಭಿಣಿ ಎಂದು ತಿಳಿಸಿದಾಗ ಗರ್ಭಪಾತ ಮಾಡಲು ಕರೆದೊಯ್ಯುತ್ತಿದ್ದ ಎಂದಿದ್ದಾಳೆ.

ವೆಬ್ದುನಿಯಾವನ್ನು ಓದಿ