ದೇಶಾದ್ಯಂತ 120ಕ್ಕೂ ಹೆಚ್ಚು ಕಾಮಧೇನು ನಗರ

ಶನಿವಾರ, 25 ಏಪ್ರಿಲ್ 2015 (09:26 IST)
ಗೋಮಾತೆಯ ರಕ್ಷಣೆಗೆ ಮುಂದಾಗಿರುವ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಹೊಸ ಯೋಜನೆಯೊಂದನ್ನು ರೂಪಿಸಿದೆ. ರಾಷ್ಟ್ರದಾದ್ಯಂತ ಕಾಮಧೇನು ನಗರಗಳನ್ನು(ಗೋ ಶಾಲೆ) ನಿರ್ಮಿಸಲು ಆರ್‌ಎಸ್ಎಸ್ ಮುಂದಾಗಿದ್ದು ಒಂದು ವರ್ಷದೊಳಗೆ ಇದನ್ನು ಪೂರೈಸುವ ಗುರಿ ಹೊಂದಿದೆ.
 

ಈಗಾಗಲೇ ಗುಜರಾತ್, ಮಧ್ಯಪ್ರದೇಶ್, ಪಶ್ಚಿಮ ಬಂಗಾಳ, ರಾಜಸ್ಥಾನಗಳ 100 ಕ್ಕೂ ಹೆಚ್ಚು ಗ್ರಾಮಗಳಲ್ಲಿ ಗೋಶಾಲೆಗಳಿಗಾಗಿ ಜಾಗಗಳನ್ನು ಗುರುತಿಸಲಾಗಿದ್ದು ದೇಶಾದ್ಯಂತ 120ಕ್ಕೂ ಹೆಚ್ಚು ಗೋಶಾಲೆಗಳನ್ನು ನಿರ್ಮಿಸಲು ಸಂಘ ನಿರ್ಧರಿಸಿದೆ. 
 
ಗ್ರಾಮಗಳಲ್ಲಿ ಸ್ಥಾಪಿತವಾಗುವ ಈ ಗೋಶಾಲೆಗಳ ಹೊಣೆಯನ್ನು ಗ್ರಾಮಸ್ಥರೇ ಹೊರಬೇಕು ಎಂದಿರುವ ಸಂಘ ಇದಕ್ಕೆ ಪ್ರತಿಯಾಗಿ ಅವರಿಗೆ ಹಾಲು, ಹಾಲಿನ ಉತ್ಪನ್ನ ಮತ್ತು ಗೋಬರ್ ಗ್ಯಾಸ್ ಒದಗಿಸುವ ಭರವಸೆ ನೀಡಿದೆ. ಗೋಕುಲ ಗುರುಕುಲಗಳನ್ನು ಪ್ರಾರಂಭಿಸಲು ಸಹ ಸಂಘ ಯೋಜನೆ ರೂಪಿಸುತ್ತಿದೆ. 
 
ಹಿಂದೂಗಳಿಂದ ಪೂಜಿಸಲ್ಪಡುವ ಕಾಮಧೇನುವನ್ನು ರಕ್ಷಿಸುವ, ಅವುಗಳ ಜೀವನವನ್ನು ಆರಾಮದಾಯಕವಾಗಿಸುವ ಮತ್ತು ಅವುಗನ್ನು ಹೆಚ್ಚು ಹೆಚ್ಚು ಜನರ ಬಳಿ ತರುವ ಉದ್ದೇಶದಿಂದ ಸಂಘ ಈ ಹೆಜ್ಜೆಯನ್ನಿಡುತ್ತಿದೆ. 

ವೆಬ್ದುನಿಯಾವನ್ನು ಓದಿ