ಸದ್ಯದಲ್ಲೇ ಬರಲಿದೆ 200 ರೂಪಾಯಿ ನೋಟು

ಮಂಗಳವಾರ, 4 ಏಪ್ರಿಲ್ 2017 (08:00 IST)
ಚಿಲ್ಲರೆ ಸಮಸ್ಯೆ ಎದುರಿಸುತ್ತಿರುವ ಜನ ಸಾಮಾನ್ಯರಿಗೆ ಸಿಹಿ ಸುದ್ದಿ ಸಿಕ್ಕಿದೆ. 200 ರೂ. ನೋಟು ಮುದ್ರಣಕ್ಕೆ ಮುಂದಾಗಿದ್ದು, ಉನ್ನತಾಧಿಕಾರಿಗಳ ಅಂತಿಮ ಮುದ್ರೆಗೆ ಕಾಯುತ್ತಿದೆ. ಸದ್ಯದಲ್ಲೇ ನೋಟುಗಳು ಪ್ರಿಂಟ್ ಅಗಿ ಜನ ಬಳಕೆಗೆ ಸಿಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.ಇದರ ಜೊತೆಗೆ ಹೊಸ ಸೆಕ್ಯೂರಿಟಿ ಫೀಚರ್`ಗಳೊಂದಿಗೆ 1000 ರೂ. ನೋಟು ಮುದ್ರಣದ ಪ್ರಸ್ತಾಪವೂ ಆರ್`ಬಿಐ ಮುಂದೆ ಇದೆ.

ಆರ್`ಬಿಐ ಮುದ್ರಿಸಲು ಉದ್ದೇಶಿಸಿರುವ 200 ರೂ. ನೋಟುಗಳಲ್ಲಿ ಹೊಸ ಸೆಕ್ಯೂರಿಟಿ ಫೀಚರ್`ಗಳು ಇರಲಿವೆ. ಇದರ ಜೊತೆಗೆ ಎಲ್ಲ ನೋಟುಗಳ ಸೆಕ್ಯೂರಿಟಿ ಫೀಚರ್`ಗಳನ್ನ ಬದಲಾಯಿಸುವ ಪ್ರಸ್ತಾಪವೂ ರಿಸರ್ವ್ ಬ್ಯಾಂಕ್ ಮುಂದಿದೆ.

ಇದರ ಜೊತೆಗೆ ಭಾರತದಲ್ಲಿ ಸದ್ಯದಲ್ಲೇ ಪ್ಲಾಸ್ಟಿಕ್ ನೋಟ್ ನೋಡುವ ಕಾಲ ಬರುವ ಸಾಧ್ಯತೆ ಇದೆ. ಪ್ರಯೋಗಾರ್ಥವಾಗಿ 10 ರೂ. ಪ್ಲಾಸ್ಟಿಕ್ ನೋಟ್ ಮುದ್ರಿಸುವ ಕುರಿತು, ಹಣಕಾಸು ಖಾತೆರಾಜ್ಯ ಸಚಿವ ಅರ್ಜುನ್ ರಾಮ್ ಮೇಘವಾಲ್ ಲೋಕಸಭೆಗೆ ಲಿಖಿತ ುತ್ತರ ನೀಡಿದ್ದಾರೆ. ಪ್ಲಾಸ್ಟಿಕ್ ನೋಟುಗಳು ಹೆಚ್ಚು ಬಾಳಿಕೆ ಬರಲಿದ್ದು, ಖೋಟಾನೋಟು ಸೃಷ್ಟಿ ಸಹ ಅಸಾಧ್ಯ.

ವೆಬ್ದುನಿಯಾವನ್ನು ಓದಿ