ಶೀಘ್ರದಲ್ಲೇ ನಿಮ್ಮ ಕೈಯಲ್ಲಿ ಓಡಾಡಲಿವೆ ಪ್ಲಾಸ್ಟಿಕ್ ನೋಟುಗಳು..

ಶುಕ್ರವಾರ, 22 ಆಗಸ್ಟ್ 2014 (12:49 IST)
ಭಾರತೀಯ ರಿಸರ್ವ್ ಬ್ಯಾಂಕ್ ಪ್ರಾಯೋಗಿಕ ಪರೀಕ್ಷೆಯ ಫಲಿತಾಂಶದ ಆಧಾರದ ಮೇಲೆ, ಮುಂದಿನ ವರ್ಷದ ವೇಳೆಗೆ ಪ್ಲಾಸ್ಟಿಕ್ ಕರೆನ್ಸಿ ನೋಟುಗಳನ್ನು ಪರಿಚಯಿಸಲು ಯೋಜಿಸುತ್ತಿದ್ದು, ಖೋಟಾನೋಟುಗಳ ಜಾಲದಿಂದ ತಪ್ಪಿಸಿಕೊಳ್ಳಲು  ಭದ್ರತಾ ವೈಶಿಷ್ಟ್ಯಗಳನ್ನು ಸುಧಾರಿಸುವ ಗುರಿ ಹೊಂದಿದೆ. ಅಲ್ಲದೇ ಮಧ್ಯವರ್ತಿಗಳನ್ನು ತೊಡೆದುಹಾಕಲು ಮತ್ತು ದಕ್ಷತೆಯನ್ನು ತರಲು ಸಾಧ್ಯವಾಗುವಂತ ರಾಷ್ಟೀಯ ಬಿಲ್ ಪಾವತಿ ವ್ಯವಸ್ಥೆಯನ್ನು ಸ್ಥಾಪಿಸುವ ಉದ್ದೇಶವನ್ನು ಸಹ ಆರ್‌ಬಿಐ ಹೊಂದಿದೆ. 

ಭಾರತೀಯ ರಿಸರ್ವ್ ಬ್ಯಾಂಕ್  ಬ್ಯಾಂಕ್ ನೋಟುಗಳ ಬಾಳಿಕೆಯನ್ನು ಉತ್ತಮಗೊಳಿಸಲು ಇತರ ಪರ್ಯಾಯ ಕ್ರಮಗಳ ಕುರಿತು ಕೂಡ ಯೋಜಿಸುತ್ತಿದೆ ಎಂದು  ಸೆಂಟ್ರಲ್ ಬ್ಯಾಂಕ್ ತನ್ನ ವಾರ್ಷಿಕ ವರದಿ 2013-14ರಲ್ಲಿ ಹೇಳಿದೆ. ಒಂದು ವರ್ಷ ವಿಚಾರ- ವಿಮರ್ಶೆಗೊಳ ಪಡಿಸಿದ ನಂತರ ಸೆಂಟ್ರಲ್ ಬ್ಯಾಂಕ್ ಪ್ಲಾಸ್ಟಿಕ್ ಕರೆನ್ಸಿಗಳಿಗಾಗಿ ಜನವರಿಯಲ್ಲಿ ಟೆಂಡರ್ ಕರೆದಿತ್ತು. ಪ್ರಾಯೋಗಿಕ ಪರೀಕ್ಷೆಗಳನ್ನು ಆಧರಿಸಿ ಮುಂದಿನ ಈ ಹೊಸಬಗೆಯ ನೋಟುಗಳನ್ನು ವ್ಯಾಪಕವಾಗಿ ಪರಿಚಯಿಸಲ್ಪಡಲಾಗುವುದು ಎಂದು ಹೇಳಲಾಗುತ್ತಿದೆ. 
 
ಮೇ ತಿಂಗಳಲ್ಲಿ ಈ ಕುರಿತು ಶಿಮ್ಲಾದಲ್ಲಿ ಬೋರ್ಡ್ ಸಭೆ ನಡೆಸಿದ ಬಳಿಕ ಮಾತನಾಡುತ್ತಿದ್ದ ಭಾರತೀಯ ರಿಸರ್ವ್ ಬ್ಯಾಂಕ್  ಗವರ್ನರ್ ರಘುರಾಮ ರಾಜನ್, ಪ್ಲಾಸ್ಟಿಕ್ ನೋಟುಗಳು ಚಲಾವಣೆಗೆ ಬರುತ್ತಿವೆ. 1 ಬಿಲಿಯನ್ ನೋಟುಗಳಿಗಾಗಿ ಟೆಂಡರ್ ಬಿಡ್‌ಗಳು ಬಂದಿವೆ. ಹಿಮಾಚಲದ ರಾಜಧಾನಿ ಶಿಮ್ಲಾ ಸೇರಿದಂತೆ 5 ನಗರಗಳಲ್ಲಿ ಪ್ರಾಯೋಗಿಕ ಪರೀಕ್ಷೆಗಳನ್ನು  ಕೈಗೊಳ್ಳಲಾಗುವುದು. ಪ್ರಾಯೋಗಿಕ ಪರೀಕ್ಷೆಗಳ ಫಲಿತಾಂಶಗಳ ಆಧಾರದ ಮೇಲೆ 2015ರಲ್ಲಿ  ಈ ಯೋಜನೆಯನ್ನು ಅನುಷ್ಠಾನಗೊಳಿಸಲಾಗುವುದು ಎಂದು ಹೇಳಿದ್ದರು.
 
ವಿಭಿನ್ನ ವಾತಾವರಣದ ಕೇಂದ್ರಗಳಾದ ಕೊಚ್ಚಿ, ಮೈಸೂರು, ಜೈಪುರ, ಭುವನೇಶ್ವರ ಮತ್ತು ಶಿಮ್ಲಾಗಳಲ್ಲಿ ಪ್ರಾಯೋಗಿಕವಾಗಿ ನೋಟುಗಳನ್ನು ಪರಿಚಯಿಸಬಹುದು. ಕಡಿಮೆ ಮುಖಬೆಲೆಯ ನೋಟುಗಳನ್ನು ಪ್ರಾಯೋಗಿಕ ಯೋಜನೆಗೆ ಬಳಸಲಾಗುತ್ತದೆ ಎಂದು ತಿಳಿದು ಬಂದಿದೆ. 

ವೆಬ್ದುನಿಯಾವನ್ನು ಓದಿ