20, 50 ರೂಪಾಯಿ ಹೊಸ ನೋಟುಗಳ ಬಿಡುಗಡೆ ಮಾಡಲಿದೆ ಆರ್ ಬಿಐ

ಭಾನುವಾರ, 4 ಡಿಸೆಂಬರ್ 2016 (19:19 IST)
ನವದೆಹಲಿ: ದೇಶದಲ್ಲಿ ನೋಟು ನಿಷೇಧವಾಗಿ ಚಿಲ್ಲರೆ ಹಣಕ್ಕೆ ಜನ ಪರದಾಡುವಂತಾಗಿದೆ. ಈ ಸಂದರ್ಭದಲ್ಲಿ ಆರ್ ಬಿಐ ಹೊಸ 20 ಮತ್ತು 50 ರೂಪಾಯಿ ನೋಟುಗಳನ್ನು ಬಿಡುಗಡೆ ಮಾಡಲು ನಿರ್ಧರಿಸಿದೆ.

ಹೊಸ ನೋಟು ಅಂದಾಕ್ಷಣ ಮತ್ತೆ ತಲೆ ಬಿಸಿ ಮಾಡಿಕೊಳ್ಳಬೇಕಿಲ್ಲ. ಹಳೇ ನೋಟು ಚಲಾವಣೆಗೆ ಯಾವುದೇ ತೊಂದರೆಯಿಲ್ಲ ಎಂದು ಆರ್ ಬಿಐ ಗವರ್ನರ್ ಊರ್ಜಿತ್ ಪಟೇಲ್ ಹೇಳಿದ್ದಾರೆ.

ಹೊಸ ವಿನ್ಯಾಸದೊಂದಿಗೆ ಎರಡು ನೋಟುಗಳೂ ಬಿಡುಗಡೆಯಾಗಲಿವೆ. ಇದನ್ನು ಹೆಚ್ಚು ಬಿಡುಗಡೆ ಮಾಡುವುದರಿಂದಲೂ ನೋಟು ಸಮಸ್ಯೆ ಕಡಿಮೆಯಾಗಬಹುದು ಎಂದು ಲೆಕ್ಕಾಚಾರ ಹಾಕಲಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ