ಆಹಾರ ಚೆಲ್ಲುವ ಮೊದಲು ಈ ಬಾಲಕಿಯ ಕತೆ ಓದಿ!

ಮಂಗಳವಾರ, 17 ಅಕ್ಟೋಬರ್ 2017 (08:46 IST)
ನವದೆಹಲಿ: ಹೊಟ್ಟೆ ತುಂಬಿದವನಿಗೆ ಹಸಿವಿನ ಮಹತ್ವ ಅರಿವಿರುವುದಿಲ್ಲ ಎನ್ನುವುದು ಸತ್ಯ. ಕೇಂದ್ರ ಸರ್ಕಾರ  ಜಾರಿಗೆ ತಂದಿರುವ ನಿಯಮವೊಂದು 11 ವರ್ಷದ ಬಾಲಕಿಯೊಬ್ಬಳು ಹಸಿವಿನಿಂದ ಸಾಯುವಂತೆ ಮಾಡಿದೆ.

 
ಜಾರ್ಖಂಡ್ ಮೂಲದ ಬಡ ಕುಟುಂಬದ ಬಾಲಕಿ ಸಂತೋಶಿ ಕುಮಾರಿ ಹಸಿವಿನಿಂದ ಮೃತಪಟ್ಟ ಬಾಲಕಿ. ರೇಶನ್ ಕಾರ್ಡ್ ಮೂಲಕ ಅಕ್ಕಿ, ಬೇಳೆ ಪಡೆಯಬೇಕಾದರೆ ಆಧಾರ್ ಕಾರ್ಡ್ ಗೆ ಲಿಂಕ್ ಮಾಡಿರಬೇಕು.

ಆದರೆ ಸಂತೋಶಿ ಕುಟುಂಬ ಆಧಾರ್ ಲಿಂಕ್ ಮಾಡಲು ಸಾಧ್ಯವಾಗಿರಲಿಲ್ಲ. ಹೀಗಾಗಿ ಈ ಬಡ ಕುಟುಂಬಕ್ಕೆ ಅಗತ್ಯದ ಅಕ್ಕಿ ಸಿಗಲಿಲ್ಲ. ಇದರಿಂದ ಹಸಿವಿನಿಂದ ಆ ಬಾಲಕಿ ಮೃತಪಟ್ಟಿದ್ದಾಳೆ ಎಂದು ಆಂಗ್ಲ ವಾಹಿನಿಯೊಂದು ವರದಿ ಮಾಡಿದೆ. ಆಧಾರ್ ಲಿಂಕ್ ಮಾಡದ ತಪ್ಪಿಗೆ ಸಂತೋಶಿ ಸೇರಿದಂತೆ ಸುಮಾರು 11 ಬಡ ಕುಟುಂಬಗಳ ಹೆಸರುಗಳನ್ನು ಪಡಿತರ ಪಟ್ಟಿಯಿಂದ ಡಿಲೀಟ್ ಮಾಡಲಾಗಿತ್ತು. ಇದು ಒಂದು ಕುಟುಂಬವನ್ನೇ ದುಃಖಕ್ಕೆ ದೂಡಿದೆ ಎಂದು ಮಾಧ್ಯಮ ವರದಿ ಹೇಳಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ