ಹೀಗಾಗಿದ್ದೇ ಆದರೆ ಮೋದಿ ಜಪ ಮಾಡಲು ಕೇಜ್ರಿವಾಲ್ ಸಿದ್ಧರಂತೆ

ಸೋಮವಾರ, 5 ಡಿಸೆಂಬರ್ 2016 (17:20 IST)
ದೊಡ್ಡ ಮುಖಬೆಲೆ ನೋಟುಗಳ ನಿಷೇಧ ನಿರ್ಧಾರವನ್ನು ಹಿಂತೆದೆಗೆದುಕೊಳ್ಳಬೇಕು ಎಂಬ ತಮ್ಮ ಆಗ್ರಹವನ್ನು ಪುನರುಚ್ಛರಿಸಿರುವ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ನೋಟು ನಿಷೇಧದ ಪರಿಣಾಮ ಭ್ರಷ್ಟಾಚಾರ ಮತ್ತು ಕಪ್ಪುಹಣ ಸಂಪೂರ್ಣವಾಗಿ ತೊಳೆದು ಹೋಗಿದ್ದೇ ಆದರೆ ತಾವು ಮೋದಿ ಮಂತ್ರ ಜಪಿಸಲು ಸಿದ್ಧ ಎಂದು ಘೋಷಿಸಿದ್ದಾರೆ.  
ಬವಾನಾದಲ್ಲಿ ವ್ಯಾಪಾರಿಗಳ ಸಭೆಯನ್ನುದ್ದೇಶಿಸಿ ಮಾತನಾಡುತ್ತಿದ್ದ ಅವರು, ದಿನದಲ್ಲಿ ಅನೇಕ ಬಾರಿ ಬಟ್ಟೆಗಳನ್ನು ಬದಲಾಯಿಸುವ ಪ್ರಧಾನಿ ಮೋದಿ ನೋಟು ನಿಷೇಧದದ ವಿಷಯದಲ್ಲಿ ಮಾತ್ರ ಕೆಲ ಸಮಯವನ್ನು ತ್ಯಾಗ ಮಾಡಿ ಎಂದು ಜನರಿಗೆ ಬೋಧಿಸುತ್ತಾರೆ ಎಂದು ವ್ಯಂಗ್ಯವಾಡಿದ್ದಾರೆ.
 
ನೋಟು ರದ್ಧತಿಯಿಂದಾಗಿ ಸಾಕಷ್ಟು ಸಂಖ್ಯೆಯಲ್ಲಿ ಕಾರ್ಮಿಕರು, ವ್ಯಾಪಾರಿಗಳು, ರೈತರು ಸಮಸ್ಯೆಗೆ ಸಿಲುಕಿದ್ದಾರೆ. ಜನರು ತಮ್ಮ ಕೆಲಸವನ್ನು ಕಳೆದುಕೊಳ್ಳುತ್ತಿದ್ದಾರೆ. ಆದರೆ ಪ್ರಧಾನಿ ಪ್ರಧಾನಿ ಬಟ್ಟೆ ಬದಲಾಯಿಸುವುದರಲ್ಲಿ ವ್ಯಸ್ತರಾಗಿದ್ದಾರೆ.ಯಾವುದೇ ನಿರ್ಧಾರವನ್ನು ಅನುಷ್ಠಾನಕ್ಕೆ ತರುವ ಮೊದಲು ಅದನ್ನು ನಿಮ್ಮ ಮೇಲೆ ಹೇರಿಕೊಳ್ಳಿ ಎಂದು ಕೇಜ್ರಿವಾಲ್ ಸಲಹೆ ನೀಡಿದ್ದಾರೆ.
 
ದುಬಾರಿ ನೋಟು ರದ್ದುಗೊಳಿಸಿದ್ದು ನಿಜವಾಗಿಯೂ ಭ್ರಷ್ಟಾಚಾರ ಮತ್ತು ಕಪ್ಪುಹಣದ ಭೂತವನ್ನು ಶಾಶ್ವತವಾಗಿ ಕೊನೆಗಾಣಿಸುತ್ತದೆ ಎಂಬುದು ನಿಜವಾದರೆ ನಾನು ಕೂಡ 'ಮೋದಿ ಮೋದಿ' ಜಪವನ್ನು ಜಪಿಸಲು ಸಿದ್ಧ. ಭ್ರಷ್ಟಾಚಾರ ನಿಗ್ರಹಕ್ಕೆ ಅಣ್ಣಾ ಹಜಾರೆಯವರ ಜತೆಯಲ್ಲಿ ನಾನು ಕೂಡ ಪ್ರಾಣವನ್ನು ಪಣಕ್ಕಿಟ್ಟು ಹೋರಾಡಿದ್ದೆವು ಎಂದಿದ್ದಾರೆ ಕೇಜ್ರಿವಾಲ್.
 

ವೆಬ್ದುನಿಯಾವನ್ನು ಓದಿ