ಬ್ಯಾಂಕ್ ಹಣ ನೀಡಲು ನಿರಾಕರಿಸಿದ್ದರಿಂದ ರಸ್ತೆ ತಡೆ ನಡೆಸಿದ ಮಹಿಳೆಯರು

ಶನಿವಾರ, 24 ಡಿಸೆಂಬರ್ 2016 (15:10 IST)
ಹಣ ಡ್ರಾ ಮಾಡಲು ಬ್ಯಾಂಕ್‌ಗೆ ಬಂದಿದ್ದ ಮಹಿಳೆಯರು, ಬ್ಯಾಂಕ್‌ನಲ್ಲಿ ಹಣವಿಲ್ಲ ಎನ್ನುವ ಉತ್ತರದಿಂದ ಆಕ್ರೋಶಗೊಂಡು ಸುಮಾರು ಅರ್ಧ ಗಂಟೆಗಳ ಕಾಲ ರಸ್ತೆ ತಡೆ ನಡೆಸಿ ಟ್ರಾಫಿಕ್ ಜಾಮ್ ಉಂಟು ಮಾಡಿದ್ದಾರೆ. 
 
ನಗರದ ದರಿಯಾ ಗಂಜ್‌ನಲ್ಲಿರುವ ಬಾಂಬೆ ಮರ್ಚೆಂಟೈಲ್ ಕೋ-ಆಪರೇಟಿವ್ ಬ್ಯಾಂಕ್‌‌ಗೆ ಇಂದು ಬೆಳಿಗ್ಗೆಯೇ ಆಗಮಿಸಿ ಹಣ ಮಾಡುವ ಉತ್ಸಾಹದಲ್ಲಿದ್ದ ಮಹಿಳೆಯರು ಸರದಿ ಸಾಲಿನಲ್ಲಿ ನಿಂತಿದ್ದರು. ಆದರೆ, ಬ್ಯಾಂಕ್‌ ಸಿಬ್ಬಂದಿಗಳು ಹಣವಿಲ್ಲ ಎಂದು ಹೇಳಿದಾಗ ಕೋಪಗೊಂಡ ಮಹಿಳೆಯರು ರಸ್ತೆ ತಡೆ ನಡೆಸಿದ್ದಾರೆ.  
 
ಇಂದು ಬೆಳಿಗ್ಗೆ 10.30 ಗಂಟೆಯಿಂದ 11 ಗಂಟೆಯವರೆಗೆ ಮಹಿಳೆಯರ ಗುಂಪು ರಸ್ತೆ ತಡೆ ನಡೆಸಿ ಟ್ರಾಫಿಕ್ ಜಾಮ್‌ ಉಂಟು ಮಾಡಿತು. ಕೂಡಲೇ ಸ್ಥಳಕ್ಕೆ ಆಗಮಿಸಿದ ಪೊಲೀಸರು ಮಹಿಳೆಯರ ಮನವೊಲಿಸಿ ರಸ್ತೆ ಸಂಚಾರ ಸುಗಮಗೊಳಿಸಿದರು.
 
ಎರಡು ಕೋಟಿ ಹಣ ನೀಡುವಂತೆ ಆರ್‌ಬಿಐಗೆ ಮನವಿ ಮಾಡಲಾಗಿತ್ತು. ಆದರೆ, ಎರಡು ಲಕ್ಷ ಮಾತ್ರ ಹಣ ಬಂದಿದೆ. ಆದ್ದರಿಂದ ಪ್ರತಿಯೊಬ್ಬ ಖಾತೆದಾರನಿಗೆ ಕೇವಲ 4 ಸಾವಿರ ರೂಪಾಯಿ ಮಾತ್ರ ನೀಡಲು ಸಾಧ್ಯವಾಗುತ್ತಿದೆ ಎಂದು ಬ್ಯಾಂಕ್ ಅಧಿಕಾರಿಗಳು ಅಸಹಾಯಕತೆಯನ್ನು ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ