ಭಾರತದ ಭವ್ಯ ಪರಂಪರೆ ಬಿಂಬಿಸಿದ ಗಣರಾಜ್ಯೋತ್ಸವ ಪೆರೇಡ್

ಸೋಮವಾರ, 26 ಜನವರಿ 2015 (11:08 IST)
ರಾಷ್ಟ್ರ ರಾಜಧಾನಿ ನವದೆಹಲಿಯ ಕೆಂಪುಕೋಟೆಯಲ್ಲಿ ವೈಭಯಯುತ ಗಣರಾಜ್ಯೋತ್ಸವ ಸಮಾರಂಭ ಅತ್ಯಂತ ಅದ್ಧೂರಿಯಾಗಿ ಇಂದು ನಡೆಯಿತು. ಭಾರತದ ಮಿಲಿಟರಿ ಶಕ್ತಿ, ಬಹು ಸಾಂಸ್ಕೃತಿಕ ಪರಂಪರೆ ಮತ್ತು ರಾಷ್ಟ್ರದ ವಿವಿಧ ಕ್ಷೇತ್ರಗಳಲ್ಲಿ ರಾಷ್ಟ್ರದ ಸಾಧನೆಗಳನ್ನು ಬಿಂಬಿಸುವ ಸ್ತಬ್ಧಚಿತ್ರಗಳು ಪಥಸಂಚಲನದಲ್ಲಿ ಕಂಡುಬಂತು.

ಮಧ್ಯ ದೆಹಲಿಯ ರೈಸಿನಾ ಹಿಲ್ಸ್‌ನಿಂದ ಐತಿಹಾಸಿಕ ಮೊಘಲ್ ಸ್ಮಾರಕ ಕೆಂಪು ಕೋಟೆವರೆಗೆ ನಡೆದ ಪೆರೇಡ್‌ ಭಾರತದ ಏಕತೆಯಲ್ಲಿ ವೈವಿಧ್ಯತೆ ಮತ್ತು ರಕ್ಷಣಾ ಸಾಮರ್ಥ್ಯವನ್ನು ಪ್ರದರ್ಶಿಸಿದವು. 
 
ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾ ದಂಪತಿಗಳು ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದಾರೆ. ಪಥಸಂಚಲದಲ್ಲಿ ದೇಶೀಯವಾಗಿ ನಿರ್ಮಿತವಾದ ಹಗುರ ಯುದ್ಧವಿಮಾನ ತೇಜಸ್, ಮುಖ್ಯ ಯುದ್ಧ ಟ್ಯಾಂಕ್ ಅರ್ಜುನ್ ಎಂಕೆ-2 ಡೆಸರ್ಟ್ ಫೆರಾರಿ ಎಂದು ಉಲ್ಲೇಖಿತವಾದ ದೇಶೀಯವಾಗಿ ವಿನ್ಯಾಸಗೊಂಡ ಮತ್ತು ಅಭಿವೃದ್ಧಿಯಾದ ಟ್ಯಾಂಕ್, ಇತ್ತೀಚೆಗೆ ಸೇರ್ಪಡೆಯಾದ ಸಾರಿಗೆ ವಿಮಾನ ಸಿ-130ಜೆ ಸೂಪರ್ ಹರ್ಕ್ಯುಲಸ್ ಮುಂತಾದವು ಭಾರತದ ಮಿಲಿಟರಿ ಶಕ್ತಿಯನ್ನು ಬಿಂಬಿಸಿದವು.
 
ಸುಧಾರಿತ ಹಗುರ ಹೆಲಿಕಾಪ್ಟರ್ ಧ್ರುವ ಹಾರಾಟದ ಪ್ರದರ್ಶನಕ್ಕೆ ಪ್ರೇಕ್ಷಕರು ಹರ್ಷೋದ್ಗಾರದ ಮೂಲಕ ಮೆಚ್ಚುಗೆ ವ್ಯಕ್ತಪಡಿಸಿದರು. 

ವೆಬ್ದುನಿಯಾವನ್ನು ಓದಿ