ಹರಿಯಾಣದಲ್ಲಿ ಶೇ 83 ಕ್ಕಿಂತ ಹೆಚ್ಚು ಶಾಸಕರು ಕೋಟ್ಯಾಧಿಪತಿಗಳು

ಮಂಗಳವಾರ, 21 ಅಕ್ಟೋಬರ್ 2014 (18:16 IST)
ಹರಿಯಾಣ ಎಲೆಕ್ಷನ್ ವಾಚ್ (ಹಿವ್) ಆಂಡ್ ಅಸೋಸಿಯೇಷನ್ (ಎಡಿಆರ್) ಫಾರ್ ಡೆಮೊಕ್ರೆಟಿಕ್ ರಿಫೊರ್ಮ್ಸ್ ಸಂಶೋಧನೆಯ ಪ್ರಕಾರ, ಹರಿಯಾಣಾದ 13ನೇ ವಿಧಾನಸಭಾ ಚುನಾಯಿತ ಶಾಸಕರಲ್ಲಿ ಪ್ರತಿಶತ 83 ಕ್ಕಿಂತ ಹೆಚ್ಚು ಮಂದಿ ಕೋಟ್ಯಾಧೀಶರಾಗಿದ್ದಾರೆ. 

ಹೊಸ ವಿಧಾನಸಭೆಯಲ್ಲಿ ಶಾಸಕರ ಸರಾಸರಿ ಸಂಪತ್ತು 12.97 ಕೋಟಿ ರೂಪಾಯಿ. ಇದು ಈ ಹಿಂದಿನ ಅಸೆಂಬ್ಲಿ ಸದಸ್ಯರ  (6.71 ಕೋಟಿ) ಸರಾಸರಿ ಸಂಪತ್ತಿಗಿಂತ ಸುಮಾರು ಎರಡು ಪಟ್ಟು ಹೆಚ್ಚು. 
 
ಪಕ್ಷಗಳ ವಿಚಾರಕ್ಕೆ ಬಂದರೆ ಐಎನ್ಎಲ್‌ಡಿ ಅಭ್ಯರ್ಥಿಗಳು ಉಳಿದವರಿಗಿಂತ ಶ್ರೀಮಂತರಾಗಿದ್ದು , 13.01 ಕೋಟಿ ಸರಾಸರಿ ಸಂಪತ್ತನ್ನು ಹೊಂದಿದ್ದಾರೆ. ಕಾಂಗ್ರೆಸ್ ಶಾಸಕರು 12.45 ಕೋಟಿ ಸಂಪತ್ತಿನ ಜತೆ ಎರಡನೇ ಸ್ಥಾನದಲ್ಲಿದ್ದರೆ, ಬಿಜೆಪಿ ಶಾಸಕರು 10.5 ಕೋಟಿ ಸಂಪತ್ತನ್ನು ಹೊಂದಿದ್ದಾರೆ ಎಂದು ಎಡಿಆರ್ ಅಧ್ಯಯನ ತಿಳಿಸಿದೆ.
 
ಚುನಾಯಿತ ಸ್ವತಂತ್ರ ಶಾಸಕರು ಪ್ರತಿಶತ 13.95 ಕೋಟಿ ಸಂಪತ್ತಿನ ಒಡೆಯರಾಗಿದ್ದಾರೆ. 
 
2014 ರ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದ ಎಲ್ಲ ಅಭ್ಯರ್ಥಿಗಳ ಸರಾಸರಿ ಸಂಪತ್ತು 4.38 ಕೋಟಿ ಇತ್ತು. ಅವುಗಳಲ್ಲಿ ಅತಿ ಶ್ರೀಮಂತ ಶಾಸಕನೊಬ್ಬ ತಾನು 212 ಕೋಟಿ ಆಸ್ತಿ ಹೊಂದಿರುವುದಾಗಿ ಘೋಷಿಸಿದ್ದ.
 
90 ಸದಸ್ಯರಿರುವ ವಿಧಾನಸಭೆಯಲ್ಲಿ 21 ಶಾಸಕರು ಈ ಬಾರಿ ಪುನರಾಯ್ಕೆಯಾಗಿದ್ದಾರೆ ಎಂದು ಅಧ್ಯಯನ ತಿಳಿಸುತ್ತದೆ. 
 
ಮರು ಚುನಾಯಿತ (2009 ರಿಂದ 2014) ಶಾಸಕರ ಆಸ್ತಿಯಲ್ಲಾದ ಸರಾಸರಿ ಬೆಳವಣಿಗೆ 9.8 ಕೋಟಿ ರೂಪಾಯಿ ಎಂದು ಸಂಶೋಧನೆ ತಿಳಿಸುತ್ತದೆ. 

ವೆಬ್ದುನಿಯಾವನ್ನು ಓದಿ