ಎಟಿಎಂ ವಿತ್ ಡ್ರಾ ಮಿತಿ 10,000 ರು.ಗೆ ಏರಿಕೆ

ಮಂಗಳವಾರ, 17 ಜನವರಿ 2017 (10:55 IST)
ಎಟಿಎಂಗಳಿಂದ ಪ್ರತಿದಿನ ಹಣ ತೆಗೆಯುವ ಮಿತಿಯನ್ನು ಭಾರತೀಯ ರಿಸರ್ವ್ ಬ್ಯಾಂಕ್ 4,500ರಿಂದ 10,000ಕ್ಕೆ ಏರಿಸಿದೆ.

ಆ ಸಂಬಂಧ ಸೋಮವಾರ ಆರ್‌ಬಿಐ ಅಧಿಸೂಚನೆ ಹೊರಡಿಸಿದ್ದು ಇಂದಿನಿಂದಲೇ ಗ್ರಾಹಕರು ದಿನವೊಂದಕ್ಕೆ 20ಸಾವಿರ ರೂಪಾಯಿ ಹಣವನ್ನು ವಿತ್ ಡ್ರಾ ಮಾಡಬಹುದಾಗಿದೆ.
 
ಆದರೆ ಒಂದು ವಾರದಲ್ಲಿ ಪಡೆಯಬಹುದಾದ 24,000 ರೂಪಾಯಿ ಮಿತಿಯಲ್ಲಿ ಬದಲಾವಣೆಯನ್ನು ಮಾಡಲಾಗಿಲ್ಲ.
 
ಚಾಲ್ತಿ ಖಾತೆಯಿಂದ ವಿತ್ ಡ್ರಾ ಮಾಡುವ ಹಣದ ಮಿತಿಯನ್ನು ಸಹ ಆರ್ ಬಿಐ ಏರಿಕೆ ಮಾಡಿದ್ದು, ವಾರವೊಂದಕ್ಕೆ ವಿತ್ ಡ್ರಾ ಮಿತಿಯನ್ನು 50,000 ದಿಂದ 1,00,000 ರೂಪಾಯಿಗೆ ಹೆಚ್ಚಿಸಿದೆ. 
 
ನವೆಂಬರ್ 8 ರಂದು ಪ್ರಧಾನಿ ಮೋದ 500 ಮತ್ತು 1,000 ರೂಪಾಯಿ ಮುಖಬೆಲೆಯ ನೋಟುಗಳನ್ನು ರದ್ದುಗೊಳಿಸಿದ ಬಳಿಕ ಎಟಿಎಂನಿಂದ ಹಣ ತೆಗೆಯುವ ಮಿತಿಯನ್ನು 2,500ಕ್ಕೆ ನಿಗದಿ ಪಡಿಸಲಾಗಿತ್ತು. ನೋಟು ರದ್ಧತಿ ಪ್ರಕ್ರಿಯೆ ಕೊನೆಗೊಂಡ ಬಳಿಕ ಅಂದರೆ ಜನವರಿ 1, 2017ರಿಂದ ಈ ಮಿತಿಯನ್ನು 4,500ರೂಪಾಯಿಗೆ ಏರಿಸಲಾಗಿತ್ತು. ಮತ್ತೀಗ ಇದನ್ನು 10,000ಕ್ಕೆ ಏರಿಸಲಾಗಿದೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ