ಐದು ರಾಜ್ಯಗಳ ಮುಖ್ಯಸ್ಥರನ್ನು ಬದಲಾಯಿಸಿದ ಕಾಂಗ್ರೆಸ್ ಹೈಕಮಾಂಡ್

ಸೋಮವಾರ, 2 ಮಾರ್ಚ್ 2015 (15:58 IST)
ಎಐಸಿಸಿ ಉಪಾಧ್ಯಕ್ಷ ಸೋನಿಯಾ ಪುತ್ರ ರಾಹುಲ್ ಗಾಂಧಿ ಮುಂದಿನ ತಿಂಗಳು ನಡೆಯಲಿರುವ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯಲ್ಲಿ ಕಾಂಗ್ರೆಸ್ ಪಕ್ಷದ ರಾಷ್ಟ್ರಧ್ಯಕ್ಷರಾಗಿ ನೇಮಕಗೊಳ್ಳಲಿದ್ದಾರೆ ಎನ್ನುವ ವರದಿಗಳ ಮಧ್ಯೆ ಐದು ರಾಜ್ಯಗಳಿಗೆ ಹೊಸ ಅಧ್ಯಕ್ಷರನ್ನಾಗಿ ನೇಮಕ ಮಾಡಿ ಕಾಂಗ್ರೆಸ್ ಆದೇಶ ಹೊರಡಿಸಿದೆ. 
 
ಅಜಯ್ ಮಾಕನ್‌ಗೆ ದೆಹಲಿ, ಅಶೋಕ್‌ ಚೌವ್ಹಾಣ್‌ಗೆ ಮಹಾರಾಷ್ಟ್ರ, ಗುಲಾಮ್ ನಬಿ ಆಜಾದ್‌ಗೆ ಜಮ್ಮು ಕಾಶ್ಮಿರ, ಭಾರತ್ ಸಿನ್ಹಾಗೆ ಗುಜರಾತ್‌, ಉತ್ತಮ ರೆಡ್ಡಿಗೆ ತೆಲಂಗಾಣದ ಉಸ್ತುವಾರಿ ನೀಡಿ ಕಾಂಗ್ರೆಸ್ ಹೈಕಮಾಂಡ್ ಆದೇಶ ಹೊರಡಿಸಿದೆ.
 
ಏತನ್ಮಧ್ಯೆ,  ಆಖಿಲ ಬಾರತ ಕಾಂಗ್ರೆಸ್ ಸಮಿತಿಯ ಕಾರ್ಯದರ್ಶಿಯಾದ ಸಂಜಯ್ ನಿರುಪಮ್ ಅವರಿಗೆ ಮುಂಬೈನ ಪ್ರಾದೇಶಿಕ ಸಮಿತಿಯ ಮುಖ್ಯಸ್ಥರನ್ನಾಗಿ ಘೋಷಿಸಲಾಗಿದೆ.
 
ರಾಹುಲ್ ಗಾಂಧಿ ಅನುಪಸ್ಥಿತಿಯಲ್ಲಿ ಕಾಂಗ್ರೆಸ್ ಹೈಕಮಾಂಡ್ ಭಾರಿ ಬದಲಾವಣೆ ತಂದಿದೆ. ರಾಹುಲ್ ಗಾಂಧಿ ಶೀಘ್ರದಲ್ಲಿಯೇ ಮರಳಲಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
 

ವೆಬ್ದುನಿಯಾವನ್ನು ಓದಿ