ಸಾಮಾಜಿಕ ಮೌಲ್ಯಗಳ ಕುಸಿತದಿಂದ ರೇಪ್, ಮಹಿಳಾ ದೌರ್ಜನ್ಯ: ಉಮಾಭಾರತಿ

ಸೋಮವಾರ, 21 ಜುಲೈ 2014 (16:13 IST)
ಸಾಮಾಜಿಕ ಮೌಲ್ಯಗಳ ಕುಸಿತದಿಂದಾಗಿ ಅತ್ಯಾಚಾರ ಮತ್ತು ಮಹಿಳೆಯರ ಮೇಲಿನ ದೌರ್ಜನ್ಯದಂತಹ ಪ್ರಕರಣಗಳು ನಡೆಯುತ್ತಿವೆ ಎಂದು ಕೇಂದ್ರ ಜಲ ಸಂಪ್ನಮೂಲ ಖಾತೆ ಸಚಿವೆ ಉಮಾಭಾರತಿ ಹೇಳಿದ್ದಾರೆ. 
 
ಭಾರತದಲ್ಲಿ ತಂದೆ ತಾಯಿಗಳು ತಮ್ಮ ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡಿ ಬೆಳೆಸುತ್ತಾರೆ.ಸಾಮಾಜಿಕ ಮೌಲ್ಯಗಳನ್ನು ಕಡ್ಡಾಯವಾಗಿ ಹೇರುವ ಅಗತ್ಯವಿದೆ. ಕಾನೂನಿಗಿಂದ ಭಾರತೀಯ ಸಂಸ್ಕ್ರತಿ ತುಂಬಾ ಪರಿಣಾಮ ಬೀರುವುದರಿಂದ ರೇಪ್ ಮತ್ತು ಮಹಿಳೆಯರ ಮೇಲಿನ ದೌರ್ಜನ್ಯಕ್ಕೆ ಕಡಿವಾಣ ಹಾಕಿದಂತಾಗುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ.  
 
ರಾಷ್ಟ್ರದ ಹಿತಾಸಕ್ತಿಗೆ ವಿರುದ್ಧವಾಗಿ ಜಾತಿ ವ್ಯವಸ್ಥೆಯನ್ನು ನೆಪವಾಗಿಸಿಕೊಂಡು ನಮ್ಮ ಧಾರ್ಮಿಕ ಸಾಹಿತ್ಯದ ಮೇಲೆ ದಾಳಿ ಮಾಡಲಾಗುತ್ತಿದೆ ಎಂದು  ಕೇಂದ್ರ ಜಲ ಸಂಪನ್ಮೂಲ ಖಾತೆ ಸಚಿವೆ ಉಮಾಭಾರತಿ ಆರೋಪಿಸಿದರು.
 
 
 
 
 

ವೆಬ್ದುನಿಯಾವನ್ನು ಓದಿ