2020ರ ವೇಳೆಗೆ ಗಂಗಾ ನದಿ ಸಂಪೂರ್ಣ ಸ್ವಚ್ಚ: ಉಮಾಭಾರತಿ

ಗುರುವಾರ, 30 ಜುಲೈ 2015 (19:04 IST)
ಗಂಗಾನದಿ ಸ್ವಚ್ಚತಾ ಅಭಿಯಾನ 2020ರೊಳಗೆ ಮುಕ್ತಾಯವಾಗುವ ನಿರೀಕ್ಷೆಗಳಿವೆ ಎಂದು ಸರಕಾರದ ಮೂಲಗಳು ತಿಳಿಸಿವೆ. 
 
ರಾಜ್ಯಸಭೆಯಲ್ಲಿ ವಿಪಕ್ಷಗಳು ಕೇಳಿದ ಪ್ರಶ್ನೆಗೆ ಉತ್ತರಿಸಿದ ಜಲಸಂಪನ್ಮೂಲ ಖಾತೆ ಸಚಿವೆ ಉಮಾ ಭಾರತಿ, ಗಂಗಾ ನದಿಯ ಸ್ವಚ್ಚತೆ ತುಂಬಾ ಕಠಿಣವಾದ ಕಾರ್ಯ ಎಂದು ತಿಳಿಸಿದ್ದಾರೆ.
 
ಮುಂಬರುವ 2020ರ ವೇಳೆಗೆ ಅನೇಕ ಯೋಜನೆಗಳು ಮುಕ್ತಾಯವಾಗಲಿರುವುದರಿಂದ ಗಂಗಾ ನದಿ ಸ್ವಚ್ಚತೆಗಾಗಿ ತೆಗೆದುಕೊಂಡ ಫಲಿತಾಂಶಗಳು ಹೊರಬರಲಿವೆ ಎಂದು ಹೇಳಿದ್ದಾರೆ.
 
ನ್ಯಾಷನಲ್ ಗಂಗಾ ರಿವರ್ ಬೇಸಿನ್ ಅಥಾರಿಟಿ 2009ರಲ್ಲಿ ಪ್ರಾರಂಭವಾಗಿದ್ದು, ಗಂಗಾ ನದಿ ಸ್ವಚ್ಚತೆಯ ಮುಖ್ಯ ಉದ್ದೇಶವಾಗಿದೆ ಎನ್ನಲಾಗಿದೆ.
 
ಎನ್‌ಜಿಬಿಆರ್‌ಎ ಇಲಾಖೆ 1985ರಿಂದ 2009ರವರೆಗೆ 966 ಯೋಜನೆಗಳನ್ನು ಜಾರಿಗೊಳಿಸಿದ್ದು 902 ಯೋಜನೆಗಳು ಮುಕ್ತಾಯಗೊಂಡಿವೆ. ಪ್ರತಿ ದಿನ 2495.73 ಮಿಲಿಯನ್ ಲೀಟರ್ಸ್‌ ಸ್ವಚ್ಚತಾ ಯೋಜನೆ ಘಟಕ ಆರಂಭಿಸಲಿದೆ ಎಂದು ಸಚಿವೆ ಉಮಾಭಾರತಿ ತಿಳಿಸಿದ್ದಾರೆ.
 

ವೆಬ್ದುನಿಯಾವನ್ನು ಓದಿ