ಮತ್ತೊಂದು ಪ್ರಕರಣದಲ್ಲಿ ಸಿಲುಕಿಕೊಂಡ ಸೋನಿಯಾ ಅಳಿಯ

ಶನಿವಾರ, 29 ನವೆಂಬರ್ 2014 (09:10 IST)
ಡಿಎಲ್ಎಫ್ ಹಗರಣದಿಂದ ಸಾಕಷ್ಟು ಹೈರಾಣಾಗಿರುವ ನೆಹರು ಮನೆತನದ ಅಳಿಯ ರಾಬರ್ಟ್ ವಾದ್ರಾ ಈಗ ಇನ್ನೊಂದು ಹಗರಣದಲ್ಲಿ ಸಿಲುಕಿಕೊಂಡಿದ್ದಾರೆ. ಎಕಾನಮಿ ಕ್ಲಾಸ್ ಟಿಕೆಟ್ ಬುಕ್ ಮಾಡಿ  ಬಿಸಿನೆಸ್ ಕ್ಲಾಸ್‌ನಲ್ಲಿ ಪ್ರಯಾಣಿಸಿದ ಆರೋಪವನ್ನವರೀಗ ಎದುರಿಸುತ್ತಿದ್ದಾರೆ.

ದೆಹಲಿಯಿಂದ ಲಂಡನ್‌ಗೆ ಎಂಟು ಸಲ ಪ್ರಯಾಣಿಸಿರುವ ಸೋನಿಯಾ ಅಳಿಯ ಪ್ರತೀ ಬಾರಿಯೂ ಬುಕ್ ಮಾಡುತ್ತಿದ್ದದ್ದು 70 ಸಾವಿರದ ಎಕಾನಮಿ ಕ್ಲಾಸ್ ಟಿಕೆಟ್. ಆದ್ರೆ, ಪ್ರಯಾಣಿಸುತ್ತಿದ್ದುದು ಮಾತ್ರ ಪ್ರೀಮಿಯರ್ ಕ್ಲಾಸ್ ಸೀಟ್‌ನಲ್ಲಿ. ಈ ಕ್ಲಾಸ್ ಟಿಕೆಟ್ ಬೆಲೆ ಬರೊಬ್ಬರಿ ಮೂರೂವರೆ ಲಕ್ಷ ರೂಪಾಯಿ.
 
ವಾದ್ರಾಗೆ ಸಿಗುತ್ತಿದ್ದ ಐಷಾರಾಮಿ ಆತಿಥ್ಯದ ಮೇಲೆ ಸದಾ ಕಣ್ಣಿಟ್ಟಿದ್ದ ತೆಹಲ್ಕಾ ಕೋಟಿಗಟ್ಟಲೇ ಹಣದ ಈ ಅವ್ಯವಹಾರವನ್ನು ದಾಖಲೆ ಸಮೇತ ಬಿಡುಗಡೆಗೊಳಿಸಿದೆ. 
 
ಈ ಆರೋಪ ಕೇವಲ ವಾದ್ರಾ ಅವರಿಗಷ್ಟೇ ಮೆತ್ತಿಕೊಂಡಿಲ್ಲ. ಕೇರಳದ ಚೀಫ್ ಸೆಕ್ರೆಟರಿ, ಭರತ್ ಭೂಷಣ್ ಹಾಗೂ ಪಶ್ಚಿಮ ಬಂಗಾಳ ಕೇಡರ್ ಅಧಿಕಾರಿ ಮನೋಜ್ ಮಾಳವೀಯ ಅವರ ಹೆಸರನ್ನು ಕೂಡ ತೆಹಲ್ಕಾ ಬಯಲಿಗೆಳೆದಿದೆ. ಈ ಉನ್ನತ ಅಧಿಕಾರಿಗಳು ಕೂಡ, ತಮ್ಮ ಅಧಿಕಾರದ ಬಲದಿಂದಲೇ ಜೆಟ್ ಏರ್ ವೇಸ್ ಅನ್ನು ದುರುಪಯೋಗ ಪಡಿಸಿಕೊಂಡಿದ್ದಾರೆ. ಕೇವಲ ಒಂದು ಲಕ್ಷ ರೂಪಾಯಿ ಖರ್ಚು ಮಾಡಿ 6 ಕೋಟಿಯಷ್ಟು ವೆಚ್ಚದ ಪ್ರಯಾಣವನ್ನು ಮಾಡಿದ್ದಾರೆ  ಈ ಅಧಿಕಾರಿಗಳು.

ವೆಬ್ದುನಿಯಾವನ್ನು ಓದಿ