ಬಿಜೆಪಿ ಸಂಸದೆ ನೃತ್ಯಕ್ಕೆ 30 ಸೆಕೆಂಡುಗಳಲ್ಲಿ 3 ಕೋಟಿ ರೂ. ಎಸೆದರು!

ಸೋಮವಾರ, 20 ಏಪ್ರಿಲ್ 2015 (12:27 IST)
ಗುಜರಾತ್‌ನ ವೆರಾವಲ್‌ನಲ್ಲಿ ಆಯೋಜಿಸಿದ್ದ ಭಗವತ್ ಕಥಾ ಕಾರ್ಯಕ್ರಮದಲ್ಲಿ ಬಿಜೆಪಿ ಸಂಸದೆ ಪೂನಾಮ್ ಬೆನ್ ಅವರ ನೃತ್ಯಕ್ಕೆ ಪುಳುಕಿತರಾದ ಜನರು ಅವರತ್ತ ಎಸೆದ ನೋಟುಗಳ ಒಟ್ಟು ಮೊತ್ತ ಬರೋಬ್ಬರಿ 3 ಕೋಟಿ ರೂ.ಗಳಾಗಿತ್ತು.  ಸ್ಥಳೀಯ ಧಾರ್ಮಿಕ ಗಾಯಕರು ಗಾಯನ ಮಾಡುತ್ತಿದ್ದಾಗ ಪೂನಾಮ್ ಬೆನ್ ಮೇಡಂ ನೃತ್ಯ ಮಾಡುತ್ತಿದ್ದರು.

ಈ ನೃತ್ಯದಿಂದ ಪುಳಕಿತರಾದ ಅಭಿಮಾನಿಗಳ ಗುಂಪು ಅವರತ್ತ ನೋಟುಗಳ ಕಂತೆಗಳನ್ನು ಎಸೆಯತೊಡಗಿದರು. ಆದರೆ ಕೇವಲ 30 ಸೆಕೆಂಡುಗಳಲ್ಲಿ ಅಭಿಮಾನಿಗಳು ಎಸೆದ ನೋಟಿನ ಮೊತ್ತ ಬರೋಬ್ಬರಿ 3 ಕೋಟಿ ರೂ.ಗಳು.  ಬಿಜೆಪಿ ಸಂಸದೆ ನೃತ್ಯದಲ್ಲಿ ಮುಳುಗಿದ್ದಾಗ ಗುಂಪು ಎಸೆತ ವಿವಿಧ ಮುಖಬೆಲೆಯ ಕರೆನ್ಸಿ ನೋಟುಗಳು ಗಾಳಿಯಲ್ಲಿ ಹಾರಾಡತೊಡಗಿದವು. 
 
ಪೂನಮ್ ಬೆನ್ ಮೇಡಮ್ ಕಂಭಾಲಿಯಾ ಅಸೆಂಬ್ಲಿ ಪ್ರತಿನಿಧಿಸುತ್ತಿದ್ದು, ನಂತರ ಜಾಮ್ನಾನಗರ್ ಕ್ಷೇತ್ರದ ಸಂಸದೆಯಾಗಿ ಆಯ್ಕೆಯಾಗಿದ್ದರು.  ಪೂನಮ್ ಬೆನ್ ಅವರ ತಂದೆ ನಾಲ್ಕು ಬಾರಿ ಪಕ್ಷೇತರ ಶಾಸಕರಾಗಿ ಕಾರ್ಯನಿರ್ವಹಿಸಿದ್ದರು. ಕಾರ್ಯಕ್ರಮವು ಮುಗಿದಾಗ ಕರೆನ್ಸಿ ನೋಟುಗಳ ಕಂತೆ  ನೆಲದ ಮೇಲೆಲ್ಲಾ ಹರಡಿಕೊಂಡಿತ್ತು. 

ವೆಬ್ದುನಿಯಾವನ್ನು ಓದಿ