ಆರ್‌ಎಸ್ಸೆಸ್ ಬೆಂಬಲಿತ ಬಿಬಿಎಸ್‌ಎಂನಿಂದ ಗೋವಾದಲ್ಲಿ ಹೊಸ ಪಕ್ಷ, ಚುನಾವಣೆಯಲ್ಲಿ ಸ್ಪರ್ಧೆ

ಮಂಗಳವಾರ, 30 ಆಗಸ್ಟ್ 2016 (19:14 IST)
ಗಮನಾರ್ಹ ಬೆಳವಣಿಗೆಯೊಂದರಲ್ಲಿ ಆರ್‌ಎಸ್ಸೆಸ್ ಬೆಂಬಲಿತ ಭಾರತೀಯ ಭಾಷಾ ಸುರಕ್ಷಾ ಮಂಚ್ 2017ರ ಗೋವಾ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ಹೊಸ ರಾಜಕೀಯ ಪಕ್ಷ ಹುಟ್ಟು ಹಾಕಿ 40 ಸೀಟುಗಳ ಪೈಕಿ 35 ಸೀಟುಗಳಿಗೆ ಅಭ್ಯರ್ಥಿಗಳನ್ನು ನಿಲ್ಲಿಸುವುದಾಗಿ ತಿಳಿಸಿದೆ. 
 
ಬಿಬಿಎಸ್‌ಎಂ ಸ್ಥಾಪಿಸುವ ರಾಜಕೀಯ ರಂಗವು ಚುನಾವಣೆಯಲ್ಲಿ ಏಕಾಂಗಿಯಾಗಿ ಸ್ಪರ್ಧಿಸಲಿದೆ. ಬಿಜೆಪಿಗೆ ಮಹಾರಾಷ್ಟ್ರವಾದಿ ಗೋಮಾಂತಕ ಪಕ್ಷ ಬೆಂಬಲ ವಾಪಸ್ ಪಡೆದರೆ ಅದರ ಜತೆ ಕೈಗೂಡಿಸಬಹುದು ಎಂದು ಆರ್‌ಎಸ್ಸೆಸ್ ಗೋವಾ ಮುಖ್ಯಸ್ಥ ಸುಭಾಷ್ ವೆಲಿಂಗ್‌ಕಾರ್ ತಿಳಿಸಿದರು. 
 
ಗೋವಾದ ಪ್ರಾಥಮಿಕ ಶಾಲೆಗಳಲ್ಲಿ ಪ್ರಾದೇಶಿಕ ಭಾಷೆಗಳಾದ ಕೊಂಕಣಿ ಮತ್ತು ಮರಾಠಿಯನ್ನು ಬೋಧನಾ ಮಾಧ್ಯಮವಾಗಿಸಬೇಕು. ಇಂಗ್ಲೀಷ್ ಮಾಧ್ಯಮದ ಶಾಲೆಗಳಿಗೆ ಅನುದಾನ ನಿಲ್ಲಿಸಬೇಕು ಎಂದು ಬಿಬಿಎಸ್‌ಎಂ ಒತ್ತಾಯಿಸಿದೆ. 

ವೆಬ್ದುನಿಯಾವನ್ನು ಓದಿ